Site icon Kundapra.com ಕುಂದಾಪ್ರ ಡಾಟ್ ಕಾಂ

ಫೆ. 15ರಂದು ಕುಂದಾಪುರ ಯುವ ಬಂಟರ ಸಂಘದ ಭಾವೈಕ್ಯ – ವರ್ಷದ ನೆನೆಪು ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ ಭಾವೈಕ್ಯ – ವರ್ಷದ ನೆನೆಪು, ದಿ. ಡಾ. ಯಡ್ತರೆ ನರಸಿಂಹ ಶೆಟ್ಟಿ ಶತಮಾನದ ಸಂಸ್ಮರಣೆ ಹಾಗೂ ಯುವ ಬಂಟರ ಸಾಧಕರಿಗೆ ಅಭಿನಂದನ ಕಾರ್ಯಕ್ರಮವು ಇಲ್ಲಿನ ಆರ್. ಏನ್. ಸಭಾಂಗಣದ ಶ್ರೀ ಗಿಳಿಯಾರು ಕುಶಲ ಹೆಗ್ಡೆ ಸಭಾಭವನದಲ್ಲಿ ಫೆ.15 ಶನಿವಾರದಂದು ಸಂಜೆ ನಡೆಯಲಿದೆ.

ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಡೆಪ್ಯೂಟಿ ರಿ. ಡಾ. ಬಿ. ವಸಂತ್ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ರಿ. ನಿರ್ದೇಶಕರಾದ ಬಿ. ಅರುಣ್ ಕುಮಾರ್ ಶೆಟ್ಟಿ ಸಂಸ್ಕರಣೆ ಮಾಡಲಿದ್ದಾರೆ. ಕುಂದಾಪುರದ ಉದ್ಯಮಿ ಎಚ್. ದಯಾನಂದ ಶೆಟ್ಟಿ ಕೃತಿ ಅನಾವರಣ ಮಾಡಲಿದ್ದಾರೆ.

ಈ ವೇಳೆ ಕುಂದಾಪುರ ತಾಲೂಕು ಸಮಿತಿ ಬಂಟರ ಯಾನೆ ನಾಡವರ ಮಾತೃಸಂಘದ ಸಂಚಾಲಕರಾದ ಸಂಪತ್ ಕುಮಾರ್ ಶೆಟ್ಟಿ, ಕೋಟೇಶ್ವರ ಯುವ ಮೆರಿಡಿಯನ್ ಆಡಳಿತ ನಿರ್ದೇಶಕರಾದ ಬಿ. ಉದಯ ಕುಮಾರ್ ಶೆಟ್ಟಿ, ತಾಲೂಕು ಯುವ ಬಂಟರ ಸಂಘ ರಿ. ಗೌರವಾಧ್ಯಕ್ಷರಾದ ವತ್ಸಲಾ ದಯಾನಂದ ಶೆಟ್ಟಿ ಹಾಗೂ ತಾಲೂಕು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಉಪಸ್ಥಿತರಿರಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Exit mobile version