Kundapra.com ಕುಂದಾಪ್ರ ಡಾಟ್ ಕಾಂ

ನುಡಿಸಿರಿ ಆರಂಭಕ್ಕೆ ರಂಗುತಂದ ವಿವಿಧ ಕಲಾತಂಡಗಳ ಮೆರವಣಿಗೆ

ಮೂಡಬಿದಿರೆ: ಪುತ್ತಿಗೆ ಸಭಾಂಗಣದಲ್ಲಿ ನುಡಿಸಿರಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಅತಿಥಿಗಳನ್ನು ಕರೆದೊಯ್ಯಲು ಆಯೋಜಿಸಲಾಗಿದ್ದ ಭವ್ಯ ಮೆರವಣಿಗೆಯ ನುಡಿಸಿರಿಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿತ್ತು. ಸುಮಾರು 50ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ನೀಡಿದ್ದವು.

ಗರ್ನಲ್, ಪೋಲಿಸ್ ಬ್ಯಾಂಡ್, ನಂದಿ ಧ್ವಜ, ಪಕ್ಕಿನಿಶಾನೆ, 40 ತಟ್ಟಿರಾಯ, ಶಂಖ, 25 ಕೊಂಬು, 15 ಚೆಂಡೆ, ಆಟಿಕಳೆಂಜ, ರಮೇಶ್ ಕಲ್ಲಡ್ಕ ಅವರ ಕೀಲು ಕುದುರೆ, ಕರಗ, ಕೊಡೆಗಳು, ಪೂತನಿ, ಯಕ್ಷಗಾನ (ಬಡಗು, ತೆಂಕು), ಮಂಗಳೂರು ಡೋಲು, ಗೊರವರ ಕುಣಿತ, ಸೋಮನ ಕುಣಿತ, ಕಂಗೀಲು, ಪೂಜಾಕುಣಿತ (ದೇವರಾಜ್ ಮಂಡ್ಯ), ವೀರಭದ್ರನ ಕುಣಿತ, ಚಿತ್ರದುರ್ಗ ಬ್ಯಾಂಡ್ ಸೆಟ್, ಕೊಡಗಿನ ಉಮ್ಮತಾಟ್, ದುಡಿಕುಣಿತ, ಬೆಂಡರ ಕುಣಿತ, ತ್ರಿವರ್ಣ ಧ್ವಜ, ಕೇರಳದ ದೇವರ ವೇಷ, ಕುಂದಾಪುರ ಡೋಲು, ಭಜನಾ ತಂಡ, ಭಜನೆಗಾರರು, ಶ್ರೀಲಂಕಾ ಕಲಾವಿದರು, ಲಂಬಾಣಿ, ಬೀದಿ ಜಾದೂಗಾರರು+ಸುಡುಗಾಡು ಸಿದ್ಧರು, ಬಿಜಾಪುರ, ಬಾಗಲಕೋಟೆಯ ಉಡುಪುಗಳು, ಮೈಸೂರಿನ ಪೇಟ, ಕೋಟು, ಕಚ್ಚಾ, ಗುಮ್ಟೆ ಕುಣಿತ, ಹಗಲು ವೇಷ, ಸ್ಕೌಟ್ ಗೈಡ್ಸ್, ನಗಾರಿ(ಮಂಜು ಮೈಸೂರು), ಪುರವಂತಿಕೆ, ಕೊಂಚಾಡಿ ಚೆಂಡೆ, ತೆಯ್ಯಮ್, ಜಗ್ಗಳಿಕೆ ಮೇಳ, ದಪ್ಪು, ಹೊನ್ನಾವರ ಬ್ಯಾಂಡ್, ಆಳ್ವಾಸ್ ಚೆಂಡೆ, ತುಳುನಾಡ ವಾದ್ಯ, ದೊಳ್ಳು ಕುಣಿತ (ಬೂದಿಯಪ್ಪ ತಂಡ, ಶಿವಮೊಗ್ಗ), ಕಂಸಾಳೆ, ರೈತರು, ಲಂಗ ದಾವಣಿ, ಬೆಳಗಾವಿ ಪೇಟ ಧರಿಸಿದ ಗಣ್ಯರು, ಪೂರ್ಣಕುಂಭ, ಸ್ಯಾಕ್ಸೋಫೋನ್ ಸೇರಿದಂತೆ ವಿವಿಧ ಕಲಾತಂಡಗಳು ವೈಭವಪೂರ್ಣ ಚಾಲನೆ ನೀಡಿದರು.

Exit mobile version