Site icon Kundapra.com ಕುಂದಾಪ್ರ ಡಾಟ್ ಕಾಂ

ವಡ್ಡರ್ಸೆ ಎನ್.ಎಸ್.ಎಸ್. ಶಿಬಿರ; ʼಪರಿಸರ ನಮಗೊಂದಿಷ್ಟು ಉಳಿಸಿʼ – ಬೀದಿ ನಾಟಕ ಪ್ರದರ್ಶನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕುಂದಾಪುರದ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ಪರಿಸರ ನಮಗೊಂದಿಷ್ಟು ಉಳಿಸಿ” ಎಂಬ ಬೀದಿ ನಾಟಕವನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು.

ಎನ್.ಎಸ್.ಎಸ್. ಸ್ವಯಂಸೇವಕಿ ಪವಿತ್ರಾ ಪೈ ನಿರ್ದೇಶಿಸಿ, ಪ್ರಾಧ್ಯಾಪಕ ಪ್ರವೀಣ್ ಮೊಗವೀರ್ ಗಂಗೊಳ್ಳಿ ಸಂಯೋಜಿಸಿದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ, ಪ್ರತಿಮಾ ರವಿರಾಜ್ ಶೆಟ್ಟಿ ಬನ್ನಾಡಿ, ಶಿಬಿರಾಧಿಕಾರಿಗಳಾದ ಡಾ| ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ ಹಾಗೂ ಸಹ ಶಿಬಿರಾಧಿಕಾರಿಗಳು, ಶಿಬಿರಾರ್ಥಿಗಳು, ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನಾಗರಿಕರು ಉಪಸ್ಥಿತರಿದ್ದರು.

Exit mobile version