ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆಯ ವತಿಯಿಂದ ಸಾಧಕರಿಗೆ ಸನ್ಮಾನ ಹಾಗೂ ಕರ್ನಾಟಕ ಸರಕಾರದಿಂದ ನಾಮನಿರ್ದೆಶನಗೊಂಡ ಒಕ್ಕೂಟದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಮಂಗಳವಾರ ಉಡುಪಿ ನೇಜಾರಿನ ವೈಟ್ ಕಾಟೇಜ್ ನಲ್ಲಿ ಆಯೋಜಿಸಲಾಯಿತು.
ಜಿಲ್ಲಾ ಸಮಿತಿಯ ಮಾಸಿಕ ಸಭೆಯಲ್ಲಿ ಸಮುದಾಯದ ಸಾಧಕರಾದ ಸಾಹಿತಿ, ಬರಹಗಾರರಾದ ಇರ್ಷಾದ್ ಮೂಡಬಿದರೆ, 2024ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮುಸ್ಥಾಕ್ ಹೆನ್ನಾಬೈಲ್, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಹಮ್ಜತ್ ಅಬ್ದುಲ್ ರಹಿಮಾನ್, ಸಮಿತಿ ಸದಸ್ಯರಾದ ಮನ್ಸೂರ್ ಇಬ್ರಾಹಿಂ ಮರವಂತೆ, ಹಮೀದ್ ಯುಸೂಫ್ ಮೂಳೂರ್, ತಾಲೂಕು ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಝಹೀರ್ ಅಹಮೆದ್ ನಾಖುದಾ, ಕುಂದಾಪುರದ ಮುಕ್ರಿ ಮೊಹಮ್ಮದ್ ಅಲ್ತಾಫ್, ಬೈಂದೂರಿನ ಉಸ್ತಾದ್ ಸಾದಿಕ್ ಹೂಡೆ, ಕುಂದಾಪುರ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿ ಸದಸ್ಯ ಖಲೀಫೆ ಅಬ್ದುಲ್ ಮುನಾಫ್, ಕುಂದಾಪುರ ತಾಲೂಕು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಮೊಹಮ್ಮದ್ ಅಲ್ಫಾಜ್, ಕಾಪು ತಾಲೂಕು ನಗರ ಯೋಜನಾ ಪ್ರಾಧಿಕಾರ ಸಮಿತಿ ಸದಸ್ಯ ಮೊಹಮ್ಮದ್ ಸಾದಿಕ್ ಅವರನ್ನು ಗೌರವದಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಝಹೀರ್ ನಾಖುದಾ ಗಂಗೊಳ್ಳಿ, ಜಿಲ್ಲಾ ಖಜಾಂಜಿ ನಕ್ವಾ ಯಾಹ್ಯಾ, ಸೆಂಟ್ರಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಝಮೀರ್ ಅಹ್ಮದ್ ರಷಾದಿ, ಸೆಂಟ್ರಲ್ ಸಮಿತಿಯ ಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಸಲೀಂ, ಎನ್‌ಎನ್‌ಒ ಟ್ರಸ್ಟೀಗಳಾದ ಶಬ್ಬೀರ್ ಕಾರ್ಕಳ ಹಾಗೂ ಮೊಹಸಿನ್ ಕಾರ್ಕಳ ಉಪಸ್ಥಿತರಿದ್ದರು.
ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರಾದ ಜಿ. ನಜೀರ್ ಸಾಹೇಬ್ ಉಡುಪಿ, ಎಸ್. ದಸ್ತಗೀರ್ ಸಾಹೇಬ್ ಕುಂದಾಪುರ, ಮೊಹಮ್ಮದ್ ರಫೀಕ್ ಹೆಬ್ರಿ, ತಾಜುದ್ದೀನ್ ಇಬ್ರಾಹಿಂ ಬ್ರಹ್ಮಾವರ, ಅಶ್ರಫ್ ಕಾಪು, ಹುಸೇನ್ ಹೈಕಾಡಿ ಹಾಗೂ ರಫೀಕ್ ಮಾಸ್ಟರ್ ಮಂಗಳೂರು ಉಪಸ್ಥಿತರಿದ್ದರು. ಅಶಕ್ತರಿಗೆ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿಯ ಪರವಾಗಿ ಸಾಸ್ತಾನದ ಹರೂನ್ ರಶೀದ್ ಅವರು ಧನ ಸಹಾಯ ಮಾಡಿದರು.
ಫಾಝಿಲ್ ಆದಿ ಉಡುಪಿ ಸ್ವಾಗತಿಸಿದರು, ಅಬ್ಬು ಮೊಹಮ್ಮದ್ ಕುಂದಾಪುರ ವಂದಿಸಿದರು ಹಾಗೂ ಫಝಲ್ ನೇರಳಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.