ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶ್ರೀ ವೀರೇಶ್ವರ ಮತ್ತು ಉಮಾಮಹೇಶ್ವರ ಶಿವರಾತ್ರಿ ಸೇವಾ ಸಮಿತಿ ಗಂಗೊಳ್ಳಿ ಇದರ ವತಿಯಿಂದ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ 3ನೇ ವರ್ಷದ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದಲ್ಲಿ ಗುರುವಾರ ಪ್ರಾರಂಭವಾಯಿತು.
ಮೀನ ಲಗ್ನ ಸುಮೂಹೂರ್ತದಲ್ಲಿ ದೀಪ ಸ್ಥಾಪನೆಯೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕ ರವೀಶ್ ಭಟ್ ಅವರು ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೇವಾ ಸಮಿತಿ ಅಧ್ಯಕ್ಷ ವಿ. ನಾಗರಾಜ ಖಾರ್ವಿ, ಗೌರವಾಧ್ಯಕ್ಷ ರಾಜ ಗಂಗೊಳ್ಳಿ, ದುರ್ಗರಾಜ ಪೂಜಾರಿ, ವರದಾ ಶೇರುಗಾರ್, ನಾಗೇಶ ಖಾರ್ವಿ ದಾಕುಹಿತ್ಲು, ಸುಬ್ಬ ಖಾರ್ವಿ ಗುಡ್ಡೆಕೇರಿ, ಶ್ರೀಧರ ಖಾರ್ವಿ ದಾಕುಹಿತ್ಲು, ಸಮಿತಿ ಸದಸ್ಯರು, ವಿವಿಧ ಭಜನಾ ಮಂಡಳಿಗಳ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.
27ರಂದು ದೀಪ ವಿಸರ್ಜನೆಯೊಂದಿಗೆ ಭಜನೆಯ ಮಂಗಲೋತ್ಸವ ನಡೆಯಲಿದೆ. ಮಹಾಶಿವರಾತ್ರಿ ಪ್ರಯುಕ್ತ 26ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ವೀರೇಶ್ವರ ದೇವರಿಗೆ ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ಮತ್ತಿತರ ಪೂಜೆ ಪುನಸ್ಕಾರಗಳು ನಡೆಯಲಿದ್ದು, ಸಂಜೆ 5 ಗಂಟೆಗೆ ನಗರ ಭಜನೆ ಸಂಕೀರ್ತನೆ ನಡೆಯಲಿದೆ. 27ರಂದು ಸಂಜೆ 6 ಗಂಟೆಗೆ ಮಂಗಳೂರು-ಕಾರವಾರ ವಲಯ ಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ.

