Site icon Kundapra.com ಕುಂದಾಪ್ರ ಡಾಟ್ ಕಾಂ

ಬೀಜಾಡಿ: ಕಾರು ಮಳಿಗೆಯ ಬೀಗ ಒಡೆದು ಬಾಲಕರಿಂದ ಕಳ್ಳತನಕ್ಕೆ ಯತ್ನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಬೀಜಾಡಿ ಗ್ರಾಮದ ಸಾಯಿ ಗ್ರೀಮ್ – ಕಾರು ಶೋರೂಂನ ಬೀಗವನ್ನು ಒಡೆದು ಕಳ್ಳತನಕ್ಕೆ ಯತ್ನಿಸಿದ ಘಟನೆ ಫೆ. 19ರ ಬೆಳಗ್ಗಿನ ಜಾವ 2.02 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ.

ಆರೋಪಿಗಳಿಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರಾಗಿದ್ದು, ಮಳಿಗೆಯ ಬೀಗವನ್ನು ಕಬ್ಬಿಣದ ರಾಡ್ ಹಾಗೂ ಸುತ್ತಿಗೆಯಿಂದ ಒಡೆಯುತ್ತಿರುವುದು ಕೆಮರಾದಲ್ಲಿ ಪತ್ತೆಯಾಗಿದೆ. ಕಳ್ಳತನಕ್ಕೆ ಯತ್ನಿಸುತ್ತಿರುವ ದೃಶ್ಯವನ್ನು ಮಳಿಗೆಯ ಪಾಲುದಾರ ನಾಗೇಂದ್ರ ಅವರು ಮೊಬೈಲ್‌ನಲ್ಲಿ ನೋಡಿ ಕೂಡಲೇ ಮಾಲಕರಾದ ನಿತಿನ್ ಅವರಿಗೆ ತಿಳಿಸಸಿದರು. ಕೂಡಲೇ ನಿತಿನ್ ಹಾಗೂ ನಾಗೇಂದ್ರ ಸ್ಥಳಕ್ಕೆ ಬಂದಿದ್ದು, ಅವರನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ.

ಬೆಳಿಗ್ಗೆ ಕುಂದಾಪುರ ಪೋಲೀಸರು ಬಾಲಕರಿಬ್ಬರನ್ನು ಪತ್ತೆಹಚ್ಚಿ, ವಿಚಾರಣೆ ಬಳಿಕ ರಿಮ್ಯಾಂಡ್‌ ಹೋಮ್‌ಗೆ ಕಳುಹಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version