Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ: ಬ್ಯಾರೀಸ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ಸಂಪನ್ನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಆಶ್ರಯದಲ್ಲಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಸಂಯೋಜನೆಯ ” ಉದ್ಯೋಗ ಮೇಳ -2025 ” ಯಶಸ್ವಿಯಾಗಿ ನಡೆಯಿತು.

ಉದ್ಯೋಗ ಮೇಳವನ್ನು ಉದ್ಘಾಟಿಸಿದ ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ -” ಇದು ಸ್ಪರ್ಧಾತ್ಮಕ ಜಗತ್ತು, ಇಂದಿನ ನವ ಪೀಳಿಗೆ ಶೈಕ್ಷಣಿಕ ಸಾಧನೆಯಲ್ಲಿ ಮುಂದಿದ್ದು ಅವರ ಅರ್ಹತೆಗೆ ತಕ್ಕ ಉದ್ಯೋಗದ ಅನಿವಾರ್ಯತೆಯಿದೆ. ಆ ನೆಲೆಯಲ್ಲಿ 119 ವರ್ಷಗಳ ಭವ್ಯ ಇತಿಹಾಸವುಳ್ಳ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳು ಸುತ್ತಮುತ್ತಲಿನ ಯುವಪೀಳಿಗೆಗೆ ಶಿಕ್ಷಣ ನೀಡುವುದರೊಂದಿಗೆ ಇದೀಗ ಉದ್ಯೋಗವನ್ನೂ ನೀಡುವ ಪುಣ್ಯತಮ ಕಾರ್ಯವಾದ ಈ ಉದ್ಯೋಗ ಮೇಳವನ್ನು ಆಯೋಜಿಸಿರುವ ಕಾರ್ಯ ಶ್ಲಾಘನೀಯ ” ಎಂದು ನುಡಿದರು.

ಮುಖ್ಯ ಅತಿಥಿಗಳಾದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ  ಕಾರ್ಯಕ್ರಮವನ್ನು ದ್ದೇಶಿಸಿ -” ಇಂದು ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ವಿದ್ಯಾದಾನ ಮಾಡುವುದೇ ತಪಸ್ಸು ! ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ ಹಾಗಾಗಿ ಗುಣಮಟ್ಟದ ಶಿಕ್ಷಣ ನೀಡಿ ಇದೀಗ ಉದ್ಯೋಗವನ್ನು ನೀಡುವ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಂಗ ಸಂಸ್ಥೆಯಾದ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಈ ಉದ್ಯೋಗ ಮೇಳ-2025 ಅತೀ ಹೆಚ್ಚು ಅಂದರೆ 2028 ನೋಂದಣಿ ಯೊಂದಿಗೆ ಸುತ್ತಮುತ್ತಲಿನ ಉದ್ಯೋಗಾಕಾಂಕ್ಷಿಗಳಿಗೆ ಬದುಕಿಗೆ ದಾರಿದೀಪವಾಗಿದೆ ” ಎಂದು ಶಿಕ್ಷಣ ಸಂಸ್ಥೆಯ ಕಾರ್ಯಕ್ಕೆ ಶುಭ ಹಾರೈಸಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೈಯದ್ ಮೊಹಮ್ಮದ್ ಬ್ಯಾರಿ  ಪ್ರಾಸ್ತಾವಿಕವಾಗಿ -” ವಿದ್ಯಾದಾನ ನಮ್ಮ ಗುರಿಯಾಗಿದ್ದು ಇದೀಗ ಉದ್ಯೋಗ ದಾನದಂತ ಪುಣ್ಯದ ಅವಕಾಶವನ್ನು ಪರಮಾತ್ಮ ಕರುಣಿಸಿದ್ದಾನೆ. ವಿದ್ಯೆ ಕಲಿತರೆ ಸಾಲದು ಕಲಿತಂತಾ ಯುವಶಕ್ತಿಗೆ ಉದ್ಯೋಗವೆಂಬ ಮಹತ್ತರ ಶಕ್ತಿಯನ್ನು ನೀಡಿ ಬದುಕಿನ ಮಹತ್ತರ ಘಟ್ಟ ತಲುಪಿಸಬೇಕು. ಕೇವಲ ಉನ್ನತ ಶಿಕ್ಷಣ ಪಡೆಯುವುದರಿಂದ ಉದ್ಯೋಗ ಸಿಗದು ಅದರ ಜೊತೆಗೆ ಸಂವಹನ ಕೌಶಲ್ಯ ಕೂಡ ಅತ್ಯಗತ್ಯ ! ಸರಕಾರದಿಂದ ಎಲ್ಲರಿಗೂ ಉದ್ಯೋಗ ಸೃಷ್ಟಿಸಲು ಅಸಾಧ್ಯ , ಇದಕ್ಕೆ ಸಾರ್ವಜನಿಕ ರಂಗದ ಸಹಕಾರದ ಅಗತ್ಯವಿದೆ .ಉದ್ಯೋಗ ನೀಡಿ ಅದೆಷ್ಟೋ ಮನೆಗೆ ಬೆಳಕಾದರೆ ಮತ್ತೆ ನಾವು ಮೋಕ್ಷವನ್ನು ಅರಸಿ ಹೋಗುವ ಅಗತ್ಯವೇ ಇಲ್ಲಾ ”  ಎಂದು ನುಡಿದರು .

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ. ಎಂ. ಅಬ್ದುಲ್ ರೆಹಮಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು ಕಾರ್ಯಕ್ರಮದ ಅತಿಥಿಗಳಾಗಿ  ಬೆಂಗಳೂರು ಇಎಸ್ಎಸ್‌ವಿಇಇ ರಿಕ್ರೂಟಿಕ್ ನಿರ್ದೇಶಕರಾದ ಜೀವನ್ ಕುಮಾರ್. ಎಸ್, ಎಕ್ಸಪರ್ಟೈಸ್ ಇಂಡಿಯಾ ಆಪರೇಶನ್ಸ್ ಜನರಲ್ ಮೆನೇಜರ್ ಶೇಖ್ ಮೊಯ್ದೀನ್, ಬ್ಯಾರೀಸ್ ವಿಶ್ವಸ್ಥ ಮಂಡಳಿ ಸದಸ್ಯರಾದ ಡಾ| ಆಸೀಫ್ ಬ್ಯಾರಿ, ಉದ್ಯೋಗ ದಾತಾರ 32 ಕಂಪೆನಿಗಳ ಹೆಚ್ಆರ್‌ಗಳು, ಶಿಕ್ಷಣತಜ್ಞರಾದ ದೋಮ ಚಂದ್ರಶೇಖರ್, ಸ್ಥಳೀಯ ಮುಖಂಡರುಗಳಾದ ಪ್ರಭಾಕರ ಕೋಡಿ, ಗೋಪಾಲ ಪೂಜಾರಿ, ಅಬ್ದುಲ್ಲಾ ಕೋಡಿ, ಬ್ಯಾರೀಸ್ ಬಿಎಡ್ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ ಕೆಎಸ್, ಡಿಎಡ್ ಪ್ರಾಂಶುಪಾಲೆ ಡಾ. ಪಿರ್ದೋಸ್, ಬ್ಯಾರೀಸ್ ಅಕಾಡೆಮಿಕ್ ಡೀನ್ ಡಾ. ಪೂರ್ಣಿಮಾ ಶೆಟ್ಟಿ, ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ,  ಕನ್ನಡ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕ ಡಾ. ಜಯಶೀಲ ಶೆಟ್ಟಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಟ್ಟಪ್ಪ, ಬೀಬಿ ಪಾತಿಮಾ ಅಂಗನವಾಡಿ ಮುಖ್ಯಸ್ಥೆ ಸುಮಿತ್ರಾ ಮತ್ತು ಶಾಲಾಭಿವೃದ್ಧಿ ಸಮಿತಿ ಹಾಗೂ ಸಲಹಾ ಮಂಡಳಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಉದ್ಯೋಗ ಮೇಳ -2025 ರಲ್ಲಿ  ಒಟ್ಟು 32 ಕಂಪೆನಿಗಳು ಪಾಲ್ಗೊಂಡಿದ್ದು 2028 ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದು 358 ನೇರ ನೇಮಕಾತಿ ಹಾಗೂ 284ನೇಮಕಾತಿಯ ಶಾರ್ಟ ಲೀಸ್ಟ್ ಮಾಡಲಾಗಿತ್ತು.

ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊಫೆಸರ್ ಶಬೀನಾ ಹೆಚ್. ಸ್ವಾಗತಿಸಿ ,ಉಪನ್ಯಾಸಕಿ ಲಮೀಝ್ ವಂದಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಪ್ರಿಯಾ ರೇಗೋ ಕಾರ್ಯಕ್ರಮ ನಿರೂಪಿಸಿದರು.

Exit mobile version