Kundapra.com ಕುಂದಾಪ್ರ ಡಾಟ್ ಕಾಂ

ಫೆ. 26ರಂದು ವನಕೊಡ್ಲು ದೇವಾಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ, ಮುಟ್ಟಿ ಪೂಜೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ವನಕೊಡ್ಲು ಗಂಗಾನಾಡು ಶ್ರೀ ಮಹಾಲಿಂಗೇಶ್ವರ ಶ್ರೀ ಮಹಿಷಮರ್ಧಿನಿ ದೇವಾಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಮತ್ತು ನಮ್ಮ ಒಡೆಯನ ಮುಟ್ಟಿ ಪೂಜೆ  ಫೆ. 26 ಬುಧವಾರದಂದು ಮಹಾ ವಿಜೃಂಭಣೆಯಿಂದ ದೇಗುಲದಲ್ಲಿ ನಡೆಯಲಿದೆ.

ಫೆ.25ರ ರಾತ್ರಿ ದುರ್ಗಾದೀಪ ನಮಸ್ಕಾರ ಪೂಜೆ ಹಾಗೂ ಫೆ.26ರಂದು ಬೆಳಿಗ್ಗೆ 5.30 ರಿಂದ 6.00ರವರೆಗೆ ಮಹಾಲಿಂಗೇಶ್ವರನಿಗೆ ಮುಟ್ಟಿ ಪೂಜೆ ನಡೆಯಲಿದೆ. ರಾತ್ರಿ 8.00ಕ್ಕೆ ಮಹಾಪೂಜೆ ಹಾಗೂ 9.00 ರಿಂದ ಬಲಿ ಮತ್ತು ಉತ್ಸವಾದಿಗಳು ನಡೆಯಲಿದೆ.

ಫೆ.27ರ ಬೆಳಿಗ್ಗೆ 6ಕ್ಕೆ ಶ್ರೀ ದೇವರ ಸನ್ನಿದಿಯಲ್ಲಿ ಪಂಚಗವ್ಯ, ಪುಣ್ಯಾಹ, ನವಕ ಪ್ರಧಾನ ಹೋಮ, ಪಂಚಾಮೃತಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪರಿವಾರ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಗಂಗಾನಾಡು ಶ್ರೀ ಮಹಾಲಿಂಗೇಶ್ವರ ಶ್ರೀ ಮಹಿಷಮರ್ದಿನಿ ದೇವಾಸ್ಥಾನ ವನಕೊಡ್ಲು ಅನುವಂಶಿಕ ಧರ್ಮದರ್ಶಿಗಳಾದ ಯಡ್ತರೆ ರಾಜಮೋಹನ ಶೆಟ್ಟಿ, ಅರ್ಚಕರು ಮತ್ತು ಪರಿಸರದ ಗ್ರಾಮಸ್ಥರು ಉಪಸ್ಥಿತರಿರುವರು.

Exit mobile version