Kundapra.com ಕುಂದಾಪ್ರ ಡಾಟ್ ಕಾಂ

ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ ಶಾಮ್ ಜಿ.ಎನ್. ಪೂಜಾರಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ: 
ಶಾಮ್ ಜಿ.ಎನ್. ಪೂಜಾರಿ ತನ್ನ 14ನೇ ವಯಸ್ಸಿನಲ್ಲಿ ಗರಿಷ್ಟ ವಿಭಿನ್ನ ರಾಗಗಳನ್ನು ಕೊಳಲಿನಲ್ಲಿ  ಒಂದು ನಿಮಿಷದಲ್ಲಿ ನುಡಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆಯನ್ನು ನಿರ್ಮಿಸಿದ್ದಾನೆ.

ಈತ ಗಂಗೊಳ್ಳಿಯ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ್ ಪೂಜಾರಿ ಮತ್ತು ಪ್ರಾಧ್ಯಾಪಕಿ ಮಾಲತಿ ಗಣೇಶ ಅವರ ಪುತ್ರ.

Exit mobile version