Kundapra.com ಕುಂದಾಪ್ರ ಡಾಟ್ ಕಾಂ

ಅಂತರ್ ಜಿಲ್ಲಾ ಕುಣಿತ ಭಜನಾ ಸ್ಪರ್ಧೆ: ಶ್ರೀ ಮಾಣಿ ಸಿದ್ಧಲಿಂಗೇಶ್ವರ ಮೊವಾಡಿ ತ್ರಾಸಿ ತಂಡ ಪ್ರಥಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ 80ನೇ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀ ಮಾಣಿ ಸಿದ್ಧಲಿಂಗೇಶ್ವರ ಮೊವಾಡಿ ತ್ರಾಸಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.

ಒಟ್ಟು 12 ತಂಡಗಳು ಭಜನಾ ತಂಡಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಶ್ರೀ ಪ್ರಸನ್ನ ಗಣಪತಿ ಭಜನಾ ಮಂಡಳಿ ಮೂಡ್ಲಕಟ್ಟೆ ದ್ವಿತೀಯ ಮತ್ತು ಶ್ರೀ ಯಕ್ಷದೇವತೆ ಭಜನಾ ಮಂಡಳಿ ಶಿರೂರು ತಂಡವು ತೃತೀಯ ಬಹುಮಾನ ಪಡೆದುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಮತ್ಸ್ಯೋದ್ಯಮಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಜಿ.ಕೆ. ಮಹೇಶ್, ತೀರ್ಪುಗಾರರಾದ ಡಾ. ಗಣೇಶ್ ಗಂಗೊಳ್ಳಿ, ಬಿ.ಪ್ರಕಾಶ್ ಶೆಣೈ ಗಂಗೊಳ್ಳಿ, ಡಾ.ಸಚಿನ್ ಸಾಲಿಯಾನ್ ಮಲ್ಪೆ, ದೇವಸ್ಥಾನದ ಅಧ್ಯಕ್ಷ ಗುರುರಾಜ್ ಗಂಗೊಳ್ಳಿ, ಕರುಣಾಕರ ಎಂ., ಅರ್ಚಕರಾದ ಜಿ.ಟಿ.ಕೃ? ಮತ್ತು ಅಶೋಕ್ ಎನ್.ಡಿ. ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಶುಭ ಹಾರೈಸಿದರು.

Exit mobile version