Site icon Kundapra.com ಕುಂದಾಪ್ರ ಡಾಟ್ ಕಾಂ

ಮಾ.2 ರಂದು ಸಿದ್ದ ಸಮಾಧಿ ಯೋಗದಿಂದ 5ನೇ ವರ್ಷದ ಪಾದಯಾತ್ರೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಪರಮಪೂಜ್ಯ ಯೋಗ ಬ್ರಹ್ಮ ಶ್ರೀ ಋಷಿ ಪ್ರಭಾಕರ್‌ ಗುರೂಜಿಯವರ ಆಶಿರ್ವಾದದೊಂದಿಗೆ, ಸಿದ್ದ ಸಮಾಧಿ ಯೋಗ ಬೈಂದೂರು ವಲಯದ ಆಚಾರ್ಯ ಶ್ರೀ ಕೇಶವ್‌ಜೀ ಬೆಳ್ನಿ ಇವರ ನೇತೃತ್ವದಲ್ಲಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಸ್ಥಾನಕ್ಕೆ 5ನೇ ವರ್ಷದ ಪಾದಯಾತ್ರೆಯು ಮಾ.2 ಆದಿತ್ಯವಾರ ಬೆಳಿಗ್ಗೆ ಗಂಟೆ 4.00ಕ್ಕೆ ಚಾಲನೆ ನೀಡಲಿದ್ದಾರೆ.  

ಇದೇ ಬರುವ ಮೇ ತಿಂಗಳಿನಲ್ಲಿ ಬೈಂದೂರಿನಲ್ಲಿ ನಡೆಯುವ ವೈಭವದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ನಿಮಿತ್ತ ಕಾರ್ಯಕ್ರಮದ ಸಂಕಲ್ಪದಾರರಿಂದ ಕೊಲ್ಲೂರು ಪಾದಯಾತ್ರೆಯಿಂದ ಮುಂದುವರಿದು ತಿರುಪತಿಗೆ ಪಾದಯಾತ್ರೆ ನಡೆಯುವುದು.

Exit mobile version