ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಪ್ರತಿಷ್ಠಿತ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ನಾಗರಾಜ್ ಕಾಮಧೇನು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸೊಸೈಟಿಯ ಉಪಾಧ್ಯಕ್ಷರಾಗಿ ಸತೀಶ್ ನರಸಿಂಹ ಶೇರಿಗಾರ್ ಆಯ್ಕೆಯಾದರು.

ಈ ವೇಳೆ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಅಜೇಯ ಹವಾಲ್ದಾರ್, ಕೆ.ಅಶೋಕ್ ಬೆಟ್ಟಿನ್, ಕೃಷ್ಣಯ್ಯ ಪಿ. ಮದ್ದೋಡಿ, ಎಂ.ಜಿ. ರಾಜೇಶ್, ಬಿ. ಶ್ರೀಧರ್ ಬೇಲಿಮನೆ, ಶ್ರೀಧರ್ ಪಿ.ಎಸ್. ಕೆ. ಸೂರ್ಯಕಾಂತ್, ರಾಧಾಕೃಷ್ಣ ನಾಯಕ್ ರಶ್ಮಿರಾಜ್ ಮತ್ತು ಶಾರದಾ ವಿಜಯ ಕುಮಾರ್ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ್ ಕಾಮಧೇನು ಮಾತನಾಡಿ, ನಮ್ಮ ಸೊಸೈಟಿಯು ಒಂದು ಸಾವಿರ ಕೋಟಿ ರೂ. ವ್ಯವಹಾರ ಹೊಂದುವ ಗುರಿ ಇದ್ದು ಈ ನಿಟ್ಟಿನಲ್ಲಿ ಎಲ್ಲಾ ನಿರ್ದೆಶಕರ ಸಹಕಾರ ಕೋರಿದರು.
ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆಯನ್ನು ಸಹಕಾರ ಇಲಾಖೆಯ ಉಪ ನಿಬಂಧಕಿ ಸುಕನ್ಯಾ ಅವರು ನಿರ್ವಹಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ರಾಘವೇಂದ್ರ ಸಹಕರಿಸಿದರು.