ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸೋಲಾರ್ ವಿದ್ಯುತ್ ಶಕ್ತಿ ಉತ್ಪಾದನಾ ಘಟಕವನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು ಉದ್ಘಾಟಿಸಿದರು.
ಸೋಲಾರ್ ವಿದ್ಯುತ್ ಶಕ್ತಿ ಘಟಕವನ್ನು ವಿನ್ಯಾಸಗೊಳಿಸಿದ ಪ್ರಸಿದ್ಧಿ ಸೋಲಾರ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಕುಂದಾಪುರ ಘಟಕದ ಪ್ರೋಜೆಕ್ಟ್ ವ್ಯವಸ್ಥಾಪಕರಾದ ಸಂತೋಷ್ ಪೂಜಾರಿ ಅವರು ಕಾಲೇಜಿನಲ್ಲಿ ಸ್ಥಾಪಿಸಲ್ಪಟ್ಟ ಈ ಸೋಲಾರ್ ವಿದ್ಯುತ್ ಶಕ್ತಿ ಮೇಲ್ಚಾವಣಿ ಘಟಕವು 163 ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ತಿಂಗಳು ಸರಿಸುಮಾರು ಇಪ್ಪತ್ತು ಸಾವಿರ ಯುನಿಟ್ಸ್ ವಿದ್ಯುತ್ ಉತ್ಪಾದನೆ ಆಗುತ್ತದೆ. ಅಲ್ಲದೆ ಪ್ರತಿ ತಿಂಗಳು 1,75,000 ರೂಪಾಯಿಗಳು ಉಳಿತಾಯ ಮಾಡಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ, ಕಾಲೇಜಿನ ಅಧೀಕ್ಷಕರಾದ ಗೋಪಾಲ್ ನಾಯ್ಕ ಉಪಸ್ಥಿತರಿದ್ದರು.

