ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಶಂಕರ ಪಂಚಮಿಯ ವಿಶಿಷ್ಠ ಕಾರ್ಯಕ್ರಮದ ಸಂಕಲ್ಪದೊಂದಿಗೆ ಶ್ರೀ ಶಂಕರ ಭಗವತ್ಪಾದರ ಪಾದುಕೆಯನ್ನು ಹೊತ್ತ ಅದ್ವೈತ ರಥವು ಶ್ರೀ ಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಶ್ರೀ ಸಂಸ್ಥಾನದವರಿಂದ ಚಾಲನೆಗೊಂಡ ಅದ್ವೈತ ರಥವು ಬೈಂದೂರು ತಾಲೂಕು ಉಪ್ಪುಂದ ಮಠದ ಗಡಿಗೆ ತಲುಪಿದ್ದು ಮಠದ ಶಿಷ್ಯರು ರಥವನ್ನು ವಿಶೇಷ ರೀತಿಯಲ್ಲಿ ಬರಮಾಡಿಕೊಂಡರು, ಪಾದುಕೆಗೆ ವಿಶೇಷ ಪೂಜೆ ನಡೆಸಲಾಯಿತು ಹಾಗೂ ಶಂಕರರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನೆಡೆಯಿತು,
ಅದ್ವೈತ ರಥವು ಕರ್ನಾಟಕ ರಾಜ್ಯ ಸೇರಿದಂತೆ ಕೇರಳ, ತಮಿಳುನಾಡು ರಾಜ್ಯದ ಕೆಲವು ಭಾಗಗಳಲ್ಲಿ ಸಂಚರಿಸಲಿರುವುದು. ವೇದಮೂರ್ತಿ ಶಂಕರ ನಾರಾಯಣ ಭಟ್ ಪೂಜಾ ಕಾರ್ಯ ನಡೆಸಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕುಂದಾಪುರ ವಲಯದ ಅಧ್ಯಕ್ಷರಾದ ಪ್ರೋ. ನಾರಾಯಣ ಸ್ವಾಮೀ, ಕಾರ್ಯದರ್ಶಿ ನಾಗರಾಜ ಭಟ್, ಗುರುದತ್ ರಾವ್, ಸತ್ಯನಾರಾಯಣ ಪುರಾಣಿಕ, ಸುಭಾಶ್ಚಂದ್ರ ಪುರಾಣಿಕ, ಯು. ಸಂದೇಶ ಭಟ್, ದಿವಾಕರ ಶೆಟ್ಟಿ, ಲಕ್ಷ್ಮಣ ಖಾರ್ವಿ, ಮಂಜುನಾಥ ಖಾರ್ವಿ, ರೇಷ್ಮಾ ಭಟ್, ಲಕ್ಷ್ಮೀ ಪುರಾಣಿಕ್, ವರದಾ ಭಟ್, ನಾಗರಾಜ ಭಟ್, ಉಮೇಶ್ ಪುರಾಣಿಕ್, ಸುಬ್ರಹ್ಮಣ್ಯ ಭಟ್, ಸುರೇಶ್ ಭಟ್, ಪರಮೇಶ್ವರ ಭಟ್, ಶಾರದಾ ಪುರಾಣಿಕ್, ಅನಿಲ್ ಡಿ., ಗೌರಿ ದೇವಾಡಿಗ, ರಾಧಾ ಪೂಜಾರಿ, ವಿಜಯ ಭಟ್, ನಾಗರಾಜ ದೇವಾಡಿಗ ಉಪಸ್ಥಿತರಿದ್ದರು.

