Kundapra.com ಕುಂದಾಪ್ರ ಡಾಟ್ ಕಾಂ

ನುಡಿಸಿರಿಗೆ ಸ್ವರವಾದ ಕೀರ್ತನ ಗಾಯಕರು

ಮೂಡುಬಿದಿರೆ: ಒಂದಲ್ಲಾ ಒಂದು ಕಾರಣಗಳಿಗಾಗಿ ವಿಶಿಷ್ಯತೆಯನ್ನು ಕಾಯ್ದುಕೊಂಡು ಬಂದಿರುವ ಆಳ್ವಾಸ್ ನುಡಿಸಿರಿ ಕಲೆ-ಸಾಹಿತ್ಯ-ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ. ಆಧುನಿಕತೆಗೆ ಸಿಕ್ಕಿ ಅದೆಷ್ಟೋ ಕಲೆಗಳು ನುಡಿಯಲ್ಲಿ ಸ್ಥಾನ ಪಡೆಯುವುದು ವಿಶೇಷ.

12ನೇ ಆಳ್ವಾಸ್ ನುಡಿಸಿರಿಯಲ್ಲಿ ನಾವು ಯಾವುದೇ ಮೂಲೆಗೆ ಹೋದರೂ ಸಹ ಅಲ್ಲಿ ಭಾವಗೀತೆ, ಜಾನಪದ ಗೀತೆ, ದಾಸರ ಕೀರ್ತನೆಗಳು ನಮ್ಮ ಕಿವಿಗೆ ಇಂಪನ್ನು ಬೀರುತ್ತಿವೆ. ಇದಕ್ಕೆ ಕಾರಣೀಭೂತರು ಆವರಣದ ವಿವಿದೆಡೆಗಳಲ್ಲಿ ಕಾಣಸಿಗುವ ಕೀರ್ತನ ಗಾಯಕರು. ಶಿವಕುಮಾರ ಬಿರಾಲಿಯವರ ನೇತೃತ್ವದಲ್ಲಿ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಕೊಪ್ಪಳ, ಧಾರವಾಡ ಹೀಗೆ ನಾನಾ ಜಿಲ್ಲೆಗಳಿಂದ ಒಟ್ಟು ಎಂಟು ತಂಡಗಳು ಆಳ್ವಾಸ್ ನುಡಿಸಿರಿಯ ಆವರಣಕ್ಕೆ ಆಗಮಿಸಿವೆ. ಇವರು ಬೆಳಗ್ಗೆ ಎಚಿಟರಿಂದ ಸಂಜೆ ಐದು ಗಂಟೆಯವರೆಗೆ ತಮ್ಮ ಗಾಯನದ ಕಂಪನ್ನು ಪಸರಿಸುತ್ತಿದ್ದಾರೆ.

– ಅಪಾರ ಉಜಿರೆ

Exit mobile version