Site icon Kundapra.com ಕುಂದಾಪ್ರ ಡಾಟ್ ಕಾಂ

ಮೊಬೈಲ್‌ ನೋಡದಂತೆ ತಾಯಿ ಗದರಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮಗಳು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಮೊಬೈಲ್‌ ನೋಡದಂತೆ ಗದರಿಸಿ ಮಗಳ ಕೈಯಲ್ಲಿದ್ದ ಮೊಬೈಲನ್ನು ತಾಯಿ ತೆಗೆದುಕೊಂಡ ಕ್ಷುಲ್ಲಕ ಕಾರಣಕ್ಕೆ ಮಗಳು ಆತ್ಮಹತ್ಯೆಗೆ ಶರಣಾದ ಘಟನೆ ಕೋಟ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಸಾಸ್ತಾನದ ಕುಂಬಾರಬೆಟ್ಟು ನಿವಾಸಿ ದಿನೇಶ್ ಮೊಗವೀರ ಅವರ ಪುತ್ರಿ ದಿಶಾ (16) ಆತ್ಮಹತ್ಯೆಗೆ ಶರಣಾದವಳು. ದಿಶಾ ಮೊಬೈಲ್ ನೋಡಿಕೊಂಡು ಕುಳಿತಿದ್ದ ಹಿನ್ನೆಲೆಯಲ್ಲಿ, ತಾಯಿ ಗದರಿಸಿ ಮೊಬೈಲ್ ತೆಗೆದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ದಿಶಾ ಕೋಣೆಯ ಬಾಗಿಲು ಹಾಕಿಕೊಂಡಿದ್ದಾಳೆ. ತಾಯಿ ಬಾಗಿಲು ತೆರೆಯಲು ಹೇಳಿದರೂ ಬಾಗಿಲು ತೆರೆಯದೆ ಇರುವುದನ್ನು ಕಂಡು ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಮನೆಯ ಕಿಟಕಿಯ ಕಂಬಿಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಸ್ಥಳೀಯರು ಬಂದು ಬಾಲಕಿಯನ್ನು ರಕ್ಷಸಿದ್ದಾರೆ. ಆಸ್ಪತ್ರೆಗೆ ಬಾಲಕಿಯನ್ನು ಕರೆದೊಯ್ದು ರಕ್ಷಣೆಗೆ ಪ್ರಯತ್ನಿಸಲಾಗಿದ್ದು ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ದಿಶಾ ಸ್ಥಳೀಯ ಕೋಟ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಸ್ಥಳಕ್ಕೆ ಕೋಟ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Exit mobile version