Kundapra.com ಕುಂದಾಪ್ರ ಡಾಟ್ ಕಾಂ

ಸಾಮಾಜಿಕ ನ್ಯಾಯದ ಅಂತಿಮ ಉದ್ದೇಶ ಜಾತಿ-ಅಸಮಾನತೆಯನ್ನು ತೊಡೆದಾಕುವುದು

ಮೂಡುಬಿದಿರೆ: ಸಮಾಜ ಒಗ್ಗೂಡಬೇಕೆಂದಿದ್ದರೆ ಸಮಾನತೆ ಇರಬೇಕು. ಅಸಮಾನತೆಯನ್ನೇ ವಿವಿಧತೆಯಲ್ಲಿನ ಏಕತೆ ಎಂದು ನಮ್ಮನ್ನು ದಿಕ್ಕು ತಪ್ಪಿಸಲಾಗಿದೆ. ನಮ್ಮದು ಸಮಸ್ತರೂ ಸೇರದ ಸಮಾಜವಾಗಿರದೇ ಜಾತಿ, ಧರ್ಮ, ಮತ ಪಂಥದ ಆಧಾರದಲ್ಲಿ ವಿಭಜಿಸಲಾಗಿದೆ ಎಂದು ಚಿಂತಕ ನಿತ್ಯಾನಂದ ಶೆಟ್ಟಿ ಹೇಳಿದರು.

ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಸಾಮಾಜಿಕ ನ್ಯಾಯ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ನೀಡಿದರು. ಭಾತರದಂತಹ ದೇಶಗಳಲ್ಲಿ ಸಾಮಾಜಿಕ ನ್ಯಾಯ ಹೊಟ್ಟೆ ಪಾಡಿನ ಪ್ರಶ್ನೆಯಾಗಿ ಉಳಿದಿಲ್ಲ. ಜಾತಿ ವ್ಯವಸ್ಥೆಯಲ್ಲಿನ ತಪ್ಪು ಕಲ್ಪನೆಯಿಂದಾಗಿ ಒಂದೊಂದು ಜಾತಿ ಒಂದೊಂದು ರಾಷ್ಟ್ರವೆಂಬ ಕಲ್ಪನೆ ಮೂಡುತ್ತಿದೆ. ಸಾಮಾಜಿಕ ನ್ಯಾಯದ ಅಂತಿಮ ಉದ್ದೇಶ ಜಾತಿ ಹಾಗೂ ಅಸಮಾನ ಸಂಬಂಧಗಳನ್ನು ತೊಡೆದುಹಾಕುವುದೇ ಆಗಿದೆ ಎಂದ ಅವರು ನಾವೆಲ್ಲರೂ ಭಾರತೀಯರು ಎಂಬುವುದಕ್ಕಿಂತ ಮೊದಲು ನಾವೆಲ್ಲರೂ ಮನುಷ್ಯರು ಎಂಬುದನ್ನು ಅರಿಯಬೇಕಾಗಿದೆ ಎಂದರು. ನುಡಿಸಿರಿಯ ರೂವಾರಿ ಡಾ. ಎಂ. ಮೋಹನ ಆಳ್ವ ವೇದಿಕೆಯಲ್ಲಿದ್ದರು.

Exit mobile version