Site icon Kundapra.com ಕುಂದಾಪ್ರ ಡಾಟ್ ಕಾಂ

ಹರಿ ಓಂ ಟ್ರೋಫಿ-2025 ಕ್ರಿಕೆಟ್‌ ಪಂದ್ಯಾಟದಲ್ಲಿ ಗಂಗೊಳ್ಳಿಯ ವಿ.ಕೆ.ಪೋವಾಸ್ ತಂಡ ಜಯಶಾಲಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಹರಿ ಓಂ ಗಂಗೊಳ್ಳಿ ಇವರ ಆಶ್ರಯದಲ್ಲಿ ಬೆಂಗಳೂರಿನ ಪೈ ಗ್ರೂಪ್ ಆಫ್ ಹೋಟೆಲ್ಸ್‌ನ ಮಾಲಕ ಎಂ. ಜಿ. ಜಗನ್ನಾಥ ಪೈ ಹಾಗೂ ಜಿ. ವಿವೇಕಾನಂದ ನಾಯಕ್ ಸಹಕಾರದೊಂದಿಗೆ ಗಂಗೊಳ್ಳಿಯ ಎಸ್. ವಿ. ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಗಂಗೊಳ್ಳಿಯ ಜಿಎಸ್‌ಬಿ ಸಮಾಜ ಬಾಂಧವರಿಗಾಗಿ ಭಾನುವಾರ ಜರಗಿದ ಸತತ 6ಷನೇ ವರ್ಷದ 30 ಗಜಗಳ ಕ್ರಿಕೆಟ್ ಪಂದ್ಯಾಟ ’ಹರಿ ಓಂ ಟ್ರೋಫಿ-2025’ದಲ್ಲಿ ಗಂಗೊಳ್ಳಿಯ ವಿ.ಕೆ.ಪೋವಾಸ್ ತಂಡ ಜಯಶಾಲಿಯಾಗಿ ಸತತ 5ನೇ ವರ್ಷ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದ ಫೈನಲ್ ಹಣಾಹಣಿಯಲ್ಲಿ ವಿ.ಕೆ.ಪೋವಾಸ್ ತಂಡವು ಗಂಗೊಳ್ಳಿಯ ಸಾನಿಧ್ಯ ಅಕೌಟೆಂಟ್ ತಂಡವನ್ನು ಸೋಲಿಸಿತ್ತು. ಗಂಗೊಳ್ಳಿಯ ಶ್ರೀ ಪಾರ್ಥಸಾರಥಿ ಇಲೆವೆನ್ ತಂಡ ತೃತೀಯ ಸ್ಥಾನಿಯಾಯಿತು. ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು  ವಿ.ಕೆ.ಪೋವಾಸ್ ತಂಡದ ಎಂ.ನಾಗೇಶ ಪೈ ಪಡೆದುಕೊಂಡರೆ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಸಾನಿಧ್ಯ ಅಕೌಟೆಂಟ್ ತಂಡದ ಎನ್.ಅನಂತ ನಾಯಕ್ ಮತ್ತು ಎಂ.ಅನಂತ ಪೈ ಪಡೆದುಕೊಂಡರು. ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಎಂ.ಪ್ರಜ್ವಲ್ ಪೈ ಪಡೆದರು.

ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾದ ಜಿ.ವಿಶ್ವನಾಥ ಭಟ್, ಜಿ.ವೆಂಕಟೇಶ ಮಲ್ಯ, ಸುಂದರ ಪೈ, ಜಿ.ನರಸಿಂಹ ನಾಯಕ್ ಮತ್ತು ಟಿ.ಭಾಸ್ಕರ ಶೆಣೈ ಅವರು ವಿಜೇತರರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಉದ್ಘಾಟನೆ : ಕ್ರಿಕೆಟ್ ಪಂದ್ಯಾಟವನ್ನು ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ಉದ್ಘಾಟಿಸಿದರು. ಬಿ.ವೆಂಕಟೇಶ ಪಡಿಯಾರ್ ಬೆಂಗಳೂರು, ಕೆ.ಶ್ರೀನಿವಾಸ ನಾಯಕ್, ಎಂ.ವರುಣ್ ಪೈ ಮತ್ತು ಎನ್.ಉಮೇಶ್ ನಾಯಕ್ ಮುಖ್ಯ ಅತಿಥಿಗಳಾಗಿ ಶುಭಾಶಂಸನೆಗೈದರು. ಹರಿ ಓಂ ಸಂಸ್ಥೆಯ ಮುಖ್ಯಸ್ಥ ಕೆ. ಬದ್ರಿನಾಥ್ ಶೆಣೈ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Exit mobile version