ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪುನೀರುನುಗ್ಗಿತೊಂದರೆಗೀಡಾಗಿರುವ ಪುರಸಭೆ ವ್ಯಾಪ್ತಿಯ ಕೋಡಿ ಪ್ರದೇಶಕ್ಕೆ ಶಾಸಕ ಕಿರಣ್ ಕುಮಾರ ಕೊಡ್ಗಿ ಅವರು ಇತ್ತೀಚಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕೋಡಿ ನಾಗಜಟ್ಟಿಗೇಶ್ವರ, ಕೋಡಿ ಚಕ್ರೇಶ್ವರಿ ದೇವಳ ವಠಾರ ಹಾಗೂ ಸೋನ್ಸ್ ಶಾಲೆ ವಠಾರದಲ್ಲಿನ ಹತ್ತಾರು ಎಕರೆ ಭತ್ತದ ಕೃಷಿಭೂಮಿಗೆ ಉಪ್ಪು ನೀರು ನುಗ್ಗಿ ಹಾನಿಗೀಡಾಗಿರುವುದು ಹಾಗೂ ಕುಡಿಯುವ ನೀರಿನ ಬಾವಿ ಕೆಟ್ಟು ಹೋಗಿರುವುದನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಅವರು ಕೋಡಿ ಹಿನ್ನೀರು ವ್ಯಾಪ್ತಿಯ ನದಿದಂಡೆ ರಚನೆ ಕುರಿತಂತೆ 2024ರಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನದಿದಂಡೆಗೆ ತಡೆಗೋಡೆ ಹಾಗೂ ರಿಂಗ್‌ರೋಡ್ ಪ್ರಸ್ತಾವನೆ ಕುರಿತಂತೆ ಸಂಬಂಧಿತ ಇಲಾಖಾ ಸಚಿವರೊಂದಿಗೆ ಚರ್ಚಿಸಿದ್ದೇನೆ. ತುರ್ತಾಗಿ ಉಪ್ಪು ನೀರು ಒಳನುಗ್ಗದಂತೆ ತಡೆಯಲು ಸಂಬಂಧಿತ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಕೋಡಿಯ ಸಾಮಾಜಿಕ ಕಾರ್ಯ ಕರ್ತ ಅಶೋಕ ಪೂಜಾರಿ ಮನವಿ ಸಲ್ಲಿಸಿ ಕಳೆದ 2 ದಶಕಗಳಿಂದ ತೊಂದರೆ ಅನುಭವಿಸುತ್ತಿದ್ದು, ಶಾಶ್ವತ ಯೋಜನೆ ರೂಪಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು. ಕೋಡಿಯ ಹಿರಿಯ ಮುಖಂಡ ಶಂಕರ ಪೂಜಾರಿ ಅಹವಾಲು ಸಲ್ಲಿಸಿ ಉಪ್ಪು ನೀರು ಬಾಧಿತ ಪ್ರದೇಶಗಳಿಗೆ ನಷ್ಟ ಪರಿಹಾರ ಒದಗಿಸಬೇಕು. ಉಪ್ಪು ಪರಿಹಾರ ನೀರುಒಳನುಗ್ಗದಂತೆ ಕೂಡಲೆ ಪರಿಹಾರ ಕಾರ್ಯಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕೋಡಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಕೋಟೆಗಾರ್, ಕೋಡಿ ಚಕ್ರೇಶ್ವರಿ ದೇವಳದ ಅಧ್ಯಕ್ಷ ಗೋಪಾಲ ಪೂಜಾರಿ, ಪ್ರಗತಿಪರ ಕೃಷಿಕ ಗಂಗಾಧರ ಪೂಜಾರಿ, ಪುರಸಭೆ ಸದಸ್ಯೆ ಕಮಲಾ ಮಂಜುನಾಥ್, ಮುಖಂಡರಾದ ನಾಗರಾಜ ಕಾಂಚನ್, ಯೋಗೇಶ್ ಪೂಜಾರಿ, ಸುನಿಲ್ ಪೂಜಾರಿ, ಪ್ರಕಾಶ್ ಪೂಜಾರಿ, ತಹಸೀಲ್ದಾಪ್ ಮಲ್ಲಿಕಾರ್ಜುನ, ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಶ್ವೇತಾ ಸಂತೋಷ್, ಬಿಜೆಪಿ ಮುಖಂಡ ರಾಜೇಶ್ ಕಾವೇರಿ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಅರುಣ್, ಶಾಂತಾರಾಮ್ ಮತ್ತಿತರರು ಇದ್ದರು.

