Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಶ್ರೀ ಹಾಗುಳಿ ಹಾಗೂ ಸಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಗಂಗೊಳ್ಳಿ ಖಾರ್ವಿಕೇರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಹಾಗುಳಿ ಹಾಗೂ ಸಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ದೈವ ದೇವರುಗಳ ಪುನರ್ ಪ್ರತಿಷ್ಠೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

ಬುಧವಾರ ಪ್ರಾರ್ಥನೆಯೊಂದಿಗೆ ಬ್ರಹ್ಮಕಲಶೋತ್ಸವ ಹಾಗೂ ಪುನರ್ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದು, ಗುರುವಾರ ಪ್ರತಿಷ್ಠಾ ಹೋಮ, ಕಲಾ ಹೋಮ, ಶಿಖರ ಪ್ರತಿಷ್ಠೆ, ಬಿಂಬಗಳ ಪ್ರತಿಷ್ಠೆ, ಪ್ರಸನ್ನ ಪೂಜೆ, ಮಧ್ಯಾಹ್ನ ಹಾಗುಳಿ ದರ್ಶನ, ಕೊರಗಜ್ಜ ದರ್ಶನ, ಸಂಜೆ ಸುದರ್ಶನ ಹೋಮ, 108 ಬ್ರಹ್ಮಕಲಶ ಮಂಡಲ ಪೂಜೆ ಮೊದಲಾದ ಕಾರ್ಯಕ್ರಮಗಳು ಜರಗಿದವು.

ಶುಕ್ರವಾರ ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ, ವೃಷಭ ಲಗ್ನ ಸುಮೂಹೂರ್ತದಲ್ಲಿ ಸಪರಿವಾರ ಹಾಗುಳಿ ದೈವಕ್ಕೆ ಬ್ರಹ್ಮ ಕಲಶ ಅಭಿಷೇಕ, ಪಲ್ಲ ಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಬಿ. ಶ್ರೀಧರ ಭಟ್ ತಂತ್ರಿಗಳು ನೇತೃತ್ವದಲ್ಲಿ ಪುರೋಹಿತರು ಹಾಗೂ ಅರ್ಚಕರಿಂದ ಸಂಪನ್ನಗೊಂಡಿತು.

ದೈವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಅಚ್ಯುತ ಕೆ., ಗೌರವಾಧ್ಯಕ್ಷ ರಾಜೀವ ಕೆ., ಪ್ರಧಾನ ಕಾರ್ಯದರ್ಶಿ ಸುಧಕರ ಕೆ., ಜೊತೆ ಕಾರ್ಯದರ್ಶಿ ನಿರಂಜನ್ ಕೆ., ಪ್ರಶಾಂತ ಕೆ., ಪ್ರಮೋದ ಕೆ., ರವೀಂದ್ರ ಕೆ., ನೀಲಕಂಠ ಕೆ., ಖಾರ್ವಿಕೇರಿ ಮನೆ ಕುಟುಂಬಸ್ಥರು, ಮೊದಲಾದವರು ಉಪಸ್ಥಿತರಿದ್ದರು.

ಪೋಟೋ ಪೈಲ್ ನೇಮ್ : ೧೫ಜಿಎಎನ್೧ (ಗಂಗೊಳ್ಳಿ ಖಾರ್ವಿಕೇರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಹಾಗುಳಿ ಹಾಗೂ ಸಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯಿತು)

Exit mobile version