ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಕೃತಿಯ ಅಧ್ಯಯನವೇ ಈ ಕ್ಯಾಂಪಿನ ಮುಖ್ಯ ಉದ್ದೇಶವಾಗಿದೆ. ನಿರಂತರವಾಗಿ ಪರಿಸರ ಪ್ರಜ್ಞೆಯನ್ನು ಮೂಡಿಸುವೆಡೆಗೆ ಶಿಕ್ಷಣ ನೀಡುತ್ತಿರುವ ಈ ಪರಿಸರದಲ್ಲಿ ಅಧ್ಯಯನ ಮಾಡುವ ಸದಾವಕಾಶ ಸಿಕ್ಕಿದೆ. ಕರ್ನಾಟಕವನ್ನು ಚಿನ್ನದ ನಾಡನ್ನಾಗಿ, ಗಂಧದ ಬೀಡನ್ನಾಗಿ ಮತ್ತು ಸದಾ ಕಾಲ ನೀರಿರುವ ನಾಡನ್ನಾಗಿ ಕಟ್ಟುತ್ತೇವೆ ಎಂಬ ಆಶಯವಿದೆ ಎಂದು ಕರ್ನಾಟಕದ ಮುಖ್ಯ ಆಯುಕ್ತರು ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಹಾಗೂ ಮಾಜಿ ಕರ್ನಾಟಕ ವಿಧಾನಸಭೆಯ ಸಚಿವರಾದ ಪಿಜಿಆರ್ ಸಿಂಧ್ಯಾ ಹೇಳಿದರು.
ಅವರು ಇಲ್ಲಿನ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರೋವರ್ಸ್ ರೇಂಜರ್ಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಈ ಸುಂದರ ಕಡಲ ತೀರ ಪರಿಸರದಲ್ಲಿ ಪರಿಸರ ಪ್ರಜ್ಞೆಯನ್ನು ಮುಖ್ಯ ಧ್ಯೇಯವಾಗಿಟ್ಟುಕೊಂಡು ಶಿಕ್ಷಣ ನೀಡುತ್ತಿರುವ ಬ್ಯಾರೀಸ್ ಸಂಸ್ಥೆ 38 ತಿಂಗಳುಗಳಿಂದ ಸ್ವಚ್ಚ ಕಡಲ ತೀರ – ಹಸಿರು ಕೋಡಿ ಅಭಿಯಾನದ ಅಡಿ ಪ್ಲಾಸ್ಟಿಕ್ ಮುಕ್ತ ಕಡಲ ತೀರವನ್ನಾಗಿ ಮಾರ್ಪಡಿಸುವಲ್ಲಿ ನಿರಂತರವಾಗಿ ಶ್ರಮಿಸುವುದರ ಮೂಲಕ ಎಲ್ಲರಿಗೂ ಮಾದರಿಯಾಗಿದೆ ಎಂದು ಶುಭಹಾರೈಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ. ಎಂ. ಅಬ್ದುಲ್ ರೆಹಮಾನ್ ಬ್ಯಾರಿ ಅವರು “ಯುವಜನರು ಜವಾಬ್ದಾರಿ ನಾಗರಿಕರಾಗಿ, ವ್ಯಕ್ತಿಗಳಾಗಿ, ತಮ್ಮ ದೈಹಿಕ ಬೌದ್ಧಿಕ ಭಾವನಾತ್ಮಕ ಸಾಮಾಜಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಿ” ಎಂದು ನುಡಿದರು ಮತ್ತು ಭಾಗವಹಿಸಿದ ಅತಿಥಿಗಣ್ಯರಿಗೆ ಹಾಗೂ ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ರೇಂಜರ್ಸ್ ರೋವರ್ಸ್ ನ 250 ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಡೆಯಿಂದ ಟಿಶರ್ಟ್ ಗಳನ್ನು ವಿತರಿಸಿದರು.
ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದ ಬ್ಯಾರೀಸ್ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ. ಆಸಿಫ್ ಬ್ಯಾರಿ ಅವರು “ನಮ್ಮ ಸಂಸ್ಥೆ ಈಗಾಗಲೇ ಸ್ಕೌಟ್ಸ್ ಎಂಡ್ ಗೈಡ್ಸ್ ಘಟಕವನ್ನು ಹೊಂದಿದ್ದು, ಇಂದು ಕರ್ನಾಟಕದ ಸ್ಕೌಟ್ಸ್ ಎಂಡ್ ಗೈಡ್ಸ್ ಇದರ ಮುಖ್ಯ ಆಯುಕ್ತರಾದ ಪಿಜಿಆರ್ ಸಿಂಧ್ಯಾ ಮಾಜಿ ಸಚಿವರು ಕರ್ನಾಟಕ ಸರ್ಕಾರ ಇವರಿಂದ ರೋವರ್ಸ್ ರೇಂಜರ್ಸ್ ಘಟಕವು ಉದ್ಘಾಟನೆಗೊಂಡಿರುವುದು ನಮ್ಮ ಸಂಸ್ಥೆಗೆ ಹೆಮ್ಮೆ. ಈ ಘಟಕದ ಮೂಲಕ ಮುಂದಿನ ದಿನಗಳಲ್ಲಿ ಅತ್ಯುತ್ತಮ ಪ್ರಜೆಗಳಾಗಿ ಉತ್ತಮ ಚಾರಿತ್ರ್ಯ ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ಬೆಳೆಸಿಕೊಂಡು ಜೀವನ ಉತ್ಸಾಹವನ್ನು ಹೆಚ್ಚಿಸುವಂತಹ ಕಾರ್ಯಗಳಲ್ಲಿ ತೊಡಗಿ” ಎಂದು ನುಡಿದರು.
ಜಿಲ್ಲಾ ಮುಖ್ಯ ಆಯುಕ್ತರು ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, 21 ಜಿಲ್ಲೆಗಳನ್ನು ಪ್ರತಿನಿಧಿಸಿದ ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ರೇಂಜರ್ಸ್ ರೋವರ್ಸ್ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟ ಬ್ಯಾರೀಸ್ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಶೆರಿಗಾರ್ ರೀಫ್ ವಾಚ್ ಅವರು ಕಡಲಾಮೆಗಳ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಸುಮನ ಶೇಖರ್, ಡೆಪ್ಯೂಟಿ ಆರ್.ಎಫ್.ಒ ಗುರುರಾಜ್, ರೋವರ್ಸ್ ಸ್ಕೌಟ್ಸ್ ಲೀಡರ್ ಪ್ರವೀಣ್, ಜಿಲ್ಲಾ ಕಾರ್ಯದರ್ಶಿ ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ಆನಂದ ಅಡಿಗ, ಜಿಲ್ಲಾ ತರಬೇತಿ ಆಯುಕ್ತರು ಉದಯ ಭಾಸ್ಕರ್ ಶೆಟ್ಟಿ, ಜಿಲ್ಲಾ ಪದಾಧಿಕಾರಿಗಳು ಆರ್.ಟಿ. ಭಟ್, ಜಿಲ್ಲಾ ಸಾನಿಯಾ ಆಯುಕ್ತರು ಮೊಹಮ್ಮದ್ ಮೌಲಾ, ಬ್ಯಾರಿಸ್ ಬಿಎಡ್ ಕಾಲೇಜಿನ ಪ್ರಾಂಶುಪಾಲರು ಸಿದ್ದಪ್ಪ ಕೆ. ಎಸ್., ಬ್ಯಾರಿಸ್ ಪದವಿ ಕಾಲೇಜಿನ ಪ್ರಾಂಶುಪಾಲರು ಶಬೀನಾ, ಬ್ಯಾರೀಸ್ ಡಿ. ಎಡ್ ಕಾಲೇಜಿನ ಪ್ರಾಂಶುಪಾಲರು ಡಾ. ಫಿರ್ದೋಸ್, ಬ್ಯಾರೀಸ್ ಪಿಯು ಕಾಲೇಜು ಹಾಗೂ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರು ಅಶ್ವಿನಿ ಶೆಟ್ಟಿ, ಶೈಕ್ಷಣಿಕ ವಿಭಾಗದ ಮುಖ್ಯಸ್ಥರು ಡಾ. ಪೂರ್ಣಿಮಾ ಶೆಟ್ಟಿ, ಬ್ಯಾರೀಸ್ ಬಿ. ಎಡ್ ಕಾಲೇಜಿನ ಉಪ ಪ್ರಾಂಶುಪಾಲರು ಪ್ರವೀಣ್ ಕುಮಾರ್ ಕೆ.ಪಿ., ರೇಂಜರ್ಸ್ ರೋವರ್ಸ್ ಟ್ರೈನರ್ ಶ್ರುತಿ, ಗೌರೀಶ್ ಶೆಟ್ಟಿ, ಶ್ರೀಲೇಖ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಊರಿನ ಗಣ್ಯರು, ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ. ಫಿರ್ದೋಸ್ ಸ್ವಾಗತಿಸಿದರು. ಆಂಗ್ಲ ಉಪನ್ಯಾಸಕಿ ಪ್ರಿಯಾ ರೇಗೊ ಕಾರ್ಯಕ್ರಮ ನಿರೂಪಣೆ ಮಾಡಿದರು ಹಾಗೂ ಮನಃಶಾಸ್ತ್ರ ಉಪನ್ಯಾಸಕಿ ಲಮಿಸ್ ಲರೈಬ್ ವಂದಿಸಿದರು.
ಈ ಸಂದರ್ಭದಲ್ಲಿ ಪಿಜಿಆರ್ ಸಿಂಧಿಯಾ ಸೇರಿದಂತೆ, ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ರೇಂಜರ್ಸ್ ಮತ್ತು ರೋವರ್ಸ್ ಅಧಿಕಾರಿಗಳು ಎಲ್ಲಾ ವಿದ್ಯಾರ್ಥಿಗಳು, ಕೋಡಿ ಹಸಿರು ಮಸೀದಿಗೆ ಭೇಟಿ ನೀಡಿ, ಸೌರ ವಿದ್ಯುತ್ ಮತ್ತು ಪವನ ವಿದ್ಯುತ್ ಉತ್ಪಾದನೆಯ ವಿಶಿಷ್ಟ ವಿನ್ಯಾಸವನ್ನು ಶ್ಲಾಘಿಸಿದರು, ಇದು ಐಜಿಬಿಸಿಯಿಂದ ಗುರುತಿಸಲ್ಪಟ್ಟ ಮೊದಲ ಆನ್-ಸೈಟ್ ನೆಟ್ ಝೀರೋ “ಪ್ರಾರ್ಥನಾ ಸ್ಥಳ” ಇದಾಗಿದೆ. ವಿದ್ಯಾರ್ಥಿಗಳಿಗೆ ಹಸಿರು ಮತ್ತು ಸುಸ್ಥಿರ ಜೀವನ ವಿಧಾನವನ್ನು ಬೆಳೆಸಿಕೊಳ್ಳುವಂತೆ ಪಿಜಿಆರ್ ಸಿಂಧಿಯಾ ವಿನಂತಿಸಿದರು.