Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ವಿಷ್ಣು ಸಹಸ್ರನಾಮ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ

??????

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಪ್ರತಿಭೆ ನಿಮ್ಮದು ವೇದಿಕೆ ನಮ್ಮದು 2025ರ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸತತ 105ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ವಿಷ್ಣು ಸಹಸ್ರನಾಮದೊಂದಿಗೆ ಆರಂಭವಾಯಿತು.

ವೇದಿಕೆಯಲ್ಲಿ ಡಾ. ರಮಾಕಾಂತ್ ಶೆಣೈ, ಪುಷ್ಪರಾಜ್, ವಸಂತಿ ಆರ್. ಪಂಡಿತ್, ಗಿರೀಶ್ ಪೈ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಉಪಸ್ಥಿತರಿದ್ದರು.

ಮೈಸೂರಿನ ಡಾ. ರಮಾಕಾಂತ್ ಶೆಣೈ ಹಾಗೂ ಕುಂದಾಪುರದ ದೀಕ್ಷಾ ಪೈ, ಪ್ರೇಕ್ಷಾ ಪೈ ಸಹೋದರಿಯರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ನಂತರ ಡಾ. ರಮಾಕಾಂತ್ ಶೆಣೈ ಅವರು ವಿಷ್ಣು ಸಹಸ್ರನಾಮದ ಬಗ್ಗೆ ಪ್ರವಚನ ನೀಡಿ ಅದರ ಮಹತ್ವ ವಿವರಿಸಿದರು.

ದೀಕ್ಷಾ ಪೈ ಹಾಗೂ ಪ್ರೇಕ್ಷಾ ಪೈ ಸಹೋದರಿಯರು ಭಕ್ತಿ ಸಂಗೀತ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು.

ವಸಂತಿ ಆರ್. ಪಂಡಿತ್ ಪ್ರಾರ್ಥಿಸಿದರು. ರಶ್ಮಿರಾಜ್ ಕುಂದಾಪುರ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version