Kundapra.com ಕುಂದಾಪ್ರ ಡಾಟ್ ಕಾಂ

ಹೊಸತನ ಸಮಾಜದ ಜೀವಂತಿಕೆಯ ಸಾಕ್ಷಿ: ವಸುಧೇಂದ್ರ

ಮೂಡುಬಿದಿರೆ: ಹೊಸತನವೆನ್ನುವುದು ಸಮಾಜದ ಜೀವಂತಿಕೆಯ ಸಾಕ್ಷಿ. ಇದು ಹಿಂದಿನ ಬೇರುಗಳ ಗಟ್ಟಿಯಾಗಿಸುತ್ತಾ ಕಾಲಕ್ಕೆ ತಕ್ಕಂತೆ ಮಾರ್ಪಾಡುಗಳಾಗುತ್ತಾ ಸಾಗುತ್ತದೆ. ಅನುಕರಣೆ ಹೊಸತನ್ನು ಸೃಷ್ಟಿಸೋಲ್ಲ. ಸೃಜಶೀಲತೆಯ ಹಿಂದೆ ಸಾಗುವವರಿಗೆ ಕಂಟಕ ಸಾಮಾನ್ಯ ಎಂದು ಸಾಹಿತಿ ವಸುಧೇಂದ್ರ ಹೇಳಿದರು.

ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ವಿಚಾರಗೋಷ್ಠಿಯಲ್ಲಿ ಆಧುನಿಕ ಕನ್ನಡ ಸಾಹಿತ್ಯ: ಹೊಸತನದ ಹುಡುಕಾಟ’ ಏಕೀಕರಣೋತ್ತರ ಸಾಹಿತ್ಯ ಎಂಬ ವಿಷಯದಲ್ಲಿ ಮಾತನಾಡಿದರು. ನಮ್ಮ ನಿಲುವನ್ನು ವ್ಯಕ್ತಪಡಿಸುವ ಸಾಮಾಜಿಕ ತಾಣಗಳು ಇಂದು ಪ್ರಬಲವಾದ ಅಸ್ತ್ರವಾಗಿ ಬೆಳೆದಿದೆ. ಹೊಸ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಾ ಜಗತ್ತಿಗೆ ತೆರೆದುಕೊಂಡಂತೆಲ್ಲ ಮತ್ತಷ್ಟು ಹೊಸತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Exit mobile version