Kundapra.com ಕುಂದಾಪ್ರ ಡಾಟ್ ಕಾಂ

ಏಕೀಕರಣಪೂರ್ವ ಕನ್ನಡ ಸಾಹಿತ್ಯ ವಿಶ್ವ ಸಾಹಿತ್ಯ ಬೆಳಕು ಚಲ್ಲಿವೆ

ಮೂಡುಬಿದಿರೆ: ಹೊಸತನದ ಹುಡುಕಾಟದಲ್ಲಿದ್ದ ಏಕೀಕರಣಪೂರ್ವ ಸಾಹಿತ್ಯ ವಿಶ್ವ ಸಾಹಿತ್ಯ ಬೆಳಕನ್ನು ಕನ್ನಡ ಸಾಹಿತ್ಯದ ಮೇಲೆ ಬೀರಿದ್ದವು. ಬರೆದದ್ದನ್ನು ಓದಬೇಕು ಮತ್ತು ಎಲ್ಲರಿಗೂ ತಲುಪಬೇಕು ಎಂಬ ಅನಿವಾರ್ಯತೆ ಅಂದಿನ ಸಾಹಿತ್ಯಕ್ಕಿತ್ತು ಎಂದು ಡಾ. ಜಿ. ಬಿ. ಹರೀಶ್ ಹೇಳಿದರು.

ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರವರ್ಣಿ ವೇದಿಯಲ್ಲಿ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ವಿಚಾರಗೋಷ್ಠಿಯಲ್ಲಿ ಏಕೀಕರಣ ಪೂರ್ವ ಸಾಹಿತ್ಯ’ ಎಂಬ ವಿಷಯದ ಕುರಿತು ಮಾತನಾಡಿದರು. ಜಡ್ಡುಗಟ್ಟಿದ ಭಾಷೆಗೆ ಹೊಸ ಜೀವ ತುಂಬುವ ಕೆಲಸವನ್ನು ಕುವೆಂಪು, ಬೆಂದ್ರೆ, ಮಾಸ್ತಿ, ಕಾರಂತರಾದಿಯಾಗಿ ಅನೇಕ ಸಾಹಿತಿಗಳು ಮಾಡಿದ್ದಾರೆ. ಹೊಸ ಪದಸಂಪತ್ತನ್ನು ಕನ್ನಡದಕ್ಕೆ ತೆಗೆದುಕೊಂಡು ಬಂದಿದ್ದಾರೆ. ಕನ್ನಡ ಕೇಂದ್ರಿತ ಉದಾರತೆ, ಸಂಪರ್ಕಕ್ಕೆ ಕಷ್ಟಸಾಧ್ಯವಾದ ಕಾಲದಲ್ಲೂ ಸಾಹಿತಿಗಳು ಕನ್ನಡ ಕಟ್ಟಿದ ಕಾರ್ಯ ಅನನ್ನುವಾದುದು.

Exit mobile version