Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಶ್ರೀ ಮಕ್ಕಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಂದ್ರಮಾನ ಯುಗಾದಿ ಆಚರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ವತಿಯಿಂದ ಚಾಂದ್ರಮಾನ ಯುಗಾದಿ ಆಚರಣೆಯನ್ನು ಬಿಜೂರು ಗ್ರಾಮದ ಶ್ರೀ ಮಕ್ಕಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯಿತು.

ಪಂಚಾಂಗ ಶ್ರವಣ ಮಾಡಿ ಯುಗಾದಿಯ ಆಚರಣೆಯ ಕುರಿತು ವಿಶೇಷ ಉಪನ್ಯಾನ ನೀಡಿದ ವೇದಮೂರ್ತಿ ವೆಂಕಟೇಶ ಶಾಸ್ತ್ರೀ ಅರೆಹೊಳೆ ಅವರನ್ನು ಸನ್ಮಾನಿಸಲಾಯಿತು.

ವಲಯದ ಮಹಿಳಾ ವೇದಿಕೆಯ ಸದಸ್ಯರು ವಿಷ್ಣುಸಹಶ್ರನಾಮ ಪಠಿಸಿದರು. ವಲಯಾಧ್ಯಕ್ಷ ಯು. ಸಂದೇಶ ಭಟ್, ಮಕ್ಕಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ವೇದಮೂರ್ತಿ ಗುರುರಾಜ್ ಭಟ್, ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಭಟ್, ಗೌರವಾಧ್ಯಕ್ಷ ಕೆ. ಅರುಣ್ ಕುಮಾರ್ ಶಾನುಭಾಗ್, ಮಾಜಿ ಅಧ್ಯಕ್ಷರಾದ ದೀಟಿ ಸೀತಾರಾಮ ಮಯ್ಯ, ವಿಶ್ವೇಶ್ವರ ಅಡಿಗ ಬಿಜೂರು, ವೇದಮೂರ್ತಿ ತಿರುಮಲೇಶ ಭಟ್, ಮಹಿಳಾ ವೇದಿಕೆಯ ಕಾರ್ಯದರ್ಶಿ ವಿದ್ಯಾ ಅಡಿಗ, ಕೋಶಾಧ್ಯಕ್ಷ ಯೋಗೀಶ್ ಕಾರಂತ್ ಉಪಸ್ಥಿತರಿದ್ದರು.

Exit mobile version