Kundapra.com ಕುಂದಾಪ್ರ ಡಾಟ್ ಕಾಂ

ಕೊರ್ಗಿ: ಟೀಮ್ ಊರ್ಮನಿ ಮಕ್ಕಳ ಸಮಾಜ ಸೇವಾ ತಂಡದಿಂದ ಉಚಿತ ವಾಕರ್ ಮತ್ತು ಸ್ಟಿಕ್ ವಿತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಟೀಮ್ ಊರ್ಮನಿ ಮಕ್ಕಳ ಸಮಾಜ ಸೇವಾ ತಂಡ ಕೊರ್ಗಿ 5ನೇ ವರ್ಷದ ಪೂರೈಸಿದ ಅಂಗವಾಗಿ ಬಡ ಇಳಿವಯಸ್ಸಿನ ಹಿರಿಯ ಜೀವಗಳಿಗೆ ನಡಿಗೆಗೊಂದು ಊರುಗೋಲು ಕಾರ್ಯಕ್ರಮದಡಿ  ಅಗತ್ಯವುಳ್ಳ ಫಲಾನುಭವಿಗಳಿಗೆ ಉಚಿತ ವಾಕರ್ ಮತ್ತು ಸ್ಟಿಕ್‌ನ್ನು ಅವರ ಮನೆಗೆ ತೆರಳಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೊರ್ಗಿ ಮತ್ತು ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈಧ್ಯಾಧಿಕಾರಿ ಡಾ. ಅರ್ಪಿತಾ, ಕೊರ್ಗಿ ಆಶಾ ಕಾರ್ಯಕರ್ತೆ ಗಂಗೆ ಕುಲಾಲ್, ಟೀಮ್ ಊರ್ಮನಿ ಮಕ್ಕಳ್ ತಂಡದ ಸದಸ್ಯರಾದ ಸಂತೋಷ ಕೊರ್ಗಿ, ನಾಗೇಶ್ ಗಾವಳಿ, ಕೃಷ್ಣ ಕೊರ್ಗಿ, ನಾಗೇಶ್ ಸಿದ್ದಾಪುರ, ಚಂದ್ರ ಕೊರ್ಗಿ ಉಪಸ್ಥಿತರಿದ್ದರು.

Exit mobile version