Site icon Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು: ಯುವಕ ನಾಪತ್ತೆ, ಪ್ರಕರಣ ದಾಖಲು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೊಲ್ಲೂರು:
ಗ್ರಾಮದ ಸಲಗೇರಿ ನಿವಾಸಿ ದೇವದತ್ (17) ಎಂಬ ಯುವಕನು ಒಂಬತ್ತನೇ ತರಗತಿ ಅನುತ್ತೀರ್ಣನಾದ ಹಿನ್ನಲೆ ಕಳೆದ ಮೂರು ವರ್ಷಗಳಿಂದ ಊರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ವಾರಕ್ಕೆ ಒಂದೆರೆಡು ಬಾರಿ ಮನೆಗೆ ಹೋಗಿಬರುತ್ತಿರುತ್ತಾನೆ.

ಮಾರ್ಚ್ 20 ರಂದು ಮನೆಗೆ ಬರುವುದಾಗಿ ಹೇಳಿದವನು ಇದೂವರೆಗೂ ಮನೆಗೂ ಬಾರದೇ ಸಂಬಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುತ್ತಾರೆ.

5 ಅಡಿ ಎತ್ತರ, ಉರುಟು ಮುಖ, ಎಣ್ಣೆಕಪ್ಪು ಮೈಬಣ್ಣ, ಸಾಧರಾಣ ಶರೀರ ಹೊಂದಿರುವ ಅವರು ಕನ್ನಡ ಹಾಗೂ ಮಲಯಾಳಂ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-258233, ಮೊ.ನಂ:9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ:9480805434 ಹಾಗೂ ಕಂಟ್ರೋಲ್ ರೂಂ 100 (0820-2526444) ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಲ್ಲೂರು ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದ್ದಾರೆ.

Exit mobile version