Site icon Kundapra.com ಕುಂದಾಪ್ರ ಡಾಟ್ ಕಾಂ

ಬೊಳಂಬಳ್ಳಿಯಲ್ಲಿ ಏಕಶಿಲಾ ಶ್ರೀ ಬಾಹುಬಲಿ‌ ಹಾಗೂ ಶ್ರೀ ರಾಮಚಂದ್ರ ದೇವರ ಪ್ರತಿಷ್ಠೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಬೋಳಂಬಳ್ಳಿಯ ಶ್ರೀ ಪದ್ಮಾವತಿ ದೇವಿ ಕ್ಷೇತ್ರದಲ್ಲಿ ಹುಂಬುಜ ಮಠದ ಪೀಠಾಧಿಪತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ಮಹಾಸ್ವಾಮೀಜಿ ಅವರ ದಿವ್ಯ ಮಾರ್ಗದರ್ಶನದಲ್ಲಿ 27 ಅಡಿ ಎತ್ತರದ ಏಕಶಿಲಾ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಹಾಗೂ 21 ಅಡಿ ಎತ್ತರದ ಭಗವಾನ್ ಶ್ರೀ ರಾಮಚಂದ್ರ ದೇವರ ಪ್ರತಿಮೆ ಪ್ರತಿಷ್ಠಾಪಿಸಲಾಯಿತು.

ಈ ಪುಣ್ಯ ಕಾರ್ಯದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಧರ್ಮರಾಜ್ ಜೈನ್ ಮತ್ತು ವನಿತಾ ಧರ್ಮರಾಜ್ ದಂಪತಿಗಳು ಅಲಂಕಾರಿಕ ಆರತಿ ಬೆಳಗುವ ಮೂಲಕ ಮುನ್ನುಡಿ ಹಾಕಿದರು.

ಈ ವೇಳೆ ಗ್ರಾ.ಪಂ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಡಾ. ಆಕಾಶ್‌ರಾಜ್, ಮೂಡುಬಿದಿರೆಯ 18 ಬಸದಿಗಳ ಆಡಳಿತ ಮೊಕೇಸರ ಆದರ್ಶ್ ಎಂ., ಸಮುದಾಯದ ಪ್ರಮುಖರಾದ ಸುಭಾಶ್ ಜೈನ್ ಕುಂದಾಪುರ, ಪದ್ಮಪ್ರಸಾದ್ ಜೈನ್ ನಾಗರಾಜ್, ಡಾ. ಅಕ್ಷತಾ ಆದರ್ಶ್, ಎಂ.ಎನ್. ವಿಜಯೇಂದ್ರ ಮಳೂರು, ಪಾವನ ರಾಜ್, ಪಾರೀಷ್ ಮತ್ತು ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಶ್ರೀ ಬಾಹುಬಲಿ ವಿಗ್ರಹವು ಉಡುಪಿ ಜಿಲ್ಲೆಯಲ್ಲಿನ ಎರಡನೇ ಬಾಹುಬಲಿ ವಿಗ್ರಹವಾಗಿದೆ.

Exit mobile version