Kundapra.com ಕುಂದಾಪ್ರ ಡಾಟ್ ಕಾಂ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ,ಎ.08:
2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು 93.90% ಸಾಧನೆ ಮಾಡುವ ಮೂಲಕ  ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಎರಡನೇ ಸ್ಥಾನವನ್ನು ದಕ್ಷಿಣ ಕನ್ನಡ (93.57%), ಕೊನೆ ಸ್ಥಾನವನ್ನು ಯಾದಗಿರಿ (73.45%)  ಪಡೆದುಕೊಂಡಿದೆ. ರಾಜ್ಯದಲ್ಲಿ ಒಟ್ಟು 73.45%  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 6,37,805 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 4,68,439 ಮಂದಿ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಅಮೂಲ್ಯ ಕಾಮತ್‌ 599 ಅಂಕ ಪಡೆದು ಮೊದಲ ಸ್ಥಾನ ಪಡೆದರೆ ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದೂ ಪಿಯು ಕಾಲೇಜಿನ ಸಂಜನಾ ಬಾಯಿ 597 ಮೊದಲ ಸ್ಥಾನ ಪಡೆದಿದ್ದಾರೆ.  ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಕಾಲೇಜಿನ ದೀಪಾಶ್ರೀ 599 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.

ಜಿಲ್ಲಾವಾರು ಫಲಿತಾಂಶ:
ಉಡುಪಿ ಜಿಲ್ಲೆ ಶೇ. 93.90 ದಕ್ಷಿಣ ಕನ್ನಡ ಜಿಲ್ಲೆ ಶೇ. 93.57 ಬೆಂಗಳೂರು ದಕ್ಷಿಣ ಶೇ. 85.36, ಕೊಡಗು ಜಿಲ್ಲೆ ಶೇ. 83.84 ಬೆಂಗಳೂರು ಉತ್ತರ ಶೇ. 83.31 ಉತ್ತರ ಕನ್ನಡ ಜಿಲ್ಲೆ ಶೇ. 82.93 ಶಿವಮೊಗ್ಗ ಜಿಲ್ಲೆ ಶೇ. 79.91 ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ. 79.70 ಚಿಕ್ಕಮಗಳೂರು ಜಿಲ್ಲೆ ಶೇ.79.56 ಹಾಸನ ಜಿಲ್ಲೆ ಶೇ. 77.56 ಚಿಕ್ಕಬಳ್ಳಾಪುರ ಜಿಲ್ಲೆ ಶೇ.75.80, ಮೈಸೂರು ಜಿಲ್ಲೆ ಶೇ.74.30 ಚಾಮರಾಜನಗರ ಜಿಲ್ಲೆ ಶೇ.73.97 ಮಂಡ್ಯ ಜಿಲ್ಲೆ ಶೇ.73.27 ಬಾಗಲಕೋಟೆ ಜಿಲ್ಲೆ ಶೇ.72.83 ಕೋಲಾರ ಜಿಲ್ಲೆ ಶೇ.72.45 ಧಾರವಾಡ ಜಿಲ್ಲೆ ಶೇ.72.32 ತುಮಕೂರು ಜಿಲ್ಲೆ ಶೇ.72.02 ರಾಮನಗರ ಜಿಲ್ಲೆ ಶೇ. 69.71 ದಾವಣಗೆರೆ ಜಿಲ್ಲೆ ಶೇ.69.45 ಹಾವೇರಿ ಜಿಲ್ಲೆ ಶೇ.76.56, ಬೀದರ್ ಜಿಲ್ಲೆ ಶೇ.67.31 ಕೊಪ್ಪಳ ಜಿಲ್ಲೆ ಶೇ.67.20 ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ. 66.76 ಗದಗ ಜಿಲ್ಲೆ ಶೇ.66.64 ಬೆಳಗಾವಿ ಜಿಲ್ಲೆ ಶೇ.65.37 ಬಳ್ಳಾರಿ ಜಿಲ್ಲೆ ಶೇ.64.41, ಚಿತ್ರದುರ್ಗ ಜಿಲ್ಲೆ ಶೇ.59.87 ವಿಜಯಪುರ ಜಿಲ್ಲೆ ಶೇ.58.81 ರಾಯಚೂರು ಜಿಲ್ಲೆ ಶೇ. 58.75 ಕಲಬುರಗಿ ಜಿಲ್ಲೆ ಶೇ.55.70 ಯಾದಗಿರಿ ಜಿಲ್ಲೆ ಶೇ.48.45ರಷ್ಟು ಫಲಿತಾಂಶ ದೊರೆತಿದೆ.

ಉನ್ನತ ಶ್ರೇಣಿ- 1,00,571
ಪ್ರಥಮ ದರ್ಜೆ- 2,78,054
ದ್ವೀತಿಯ ದರ್ಜೆ-70969
ತೃತೀಯ ದರ್ಜೆ-18845

ವಿಭಾಗವಾರು ಸಾಧನೆ
ಕಲಾ

ಹಾಜರಾದವರು :1,53,043
ಉತ್ತೀರ್ಣ- 81,533 (53.79%)
ವಾಣಿಜ್ಯ
ಹಾಜರಾದವರು -2,04,329
ಉತ್ತೀರ್ಣ -1,55,425 (76.07%)
ವಿಜ್ಞಾನ
ಹಾಜರಾದವರು – 2,80,433
ಉತ್ತೀರ್ಣ – 2,31,461 (82.54%)

ಮಾಧ್ಯಮವಾರು ಫಲಿತಾಂಶ
ಕನ್ನಡ
ಹಾಜರಾದವರು -2,08,794
ತೇರ್ಗಡೆಯಾದವರು – 1,17,703 (56.37%)
ಇಂಗ್ಲೀಷ್‌
ಹಾಜರಾದವರು -4,29,011
ತೇರ್ಗಡೆಯಾದವರು -3,50,736(81.75%)

ಮಧ್ಯಾಹ್ನ 12:45ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಲ್ಲೇಶ್ವರದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಮಧ್ಯಾಹ್ನ 1:30 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗೊಂಡಿತು.

ದ್ವಿತೀಯ ಪಿಯುಸಿ ಪರಿಕ್ಷೆ ಕಳೆದ ಮಾರ್ಚ್ 1 ರಿಂದ ಆರಂಭಗೊಂಡು ಮಾರ್ಚ್ 20 ರಂದು ಮುಕ್ತಾಯಗೊಂಡಿತ್ತು. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ತ್ವರಿತಗತಿಯಲ್ಲಿ ನಡೆಸಿ ಇಂದು ಫಲಿತಾಂಶ ಘೋಷಣೆ ಮಾಡಲಾಯಿತು.

Exit mobile version