Kundapra.com ಕುಂದಾಪ್ರ ಡಾಟ್ ಕಾಂ

ದ್ವಿತೀಯ ಪಿ.ಯು ಫಲಿತಾಂಶ: ಶಂಕರನಾರಾಯಣದ ಮದರ್ ತೆರೇಸಾಸ್ ಪಿ.ಯು ಕಾಲೇಜಿಗೆ ರಾಜ್ಯಮಟ್ಟದಲ್ಲಿ 2 ರ್ಯಾಂಕ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಶಂಕರನಾರಾಯಣದ ಮದರ್ ತೆರೇಸಾ’ಸ್ ಪಿ ಯು ಕಾಲೇಜಿಗೆ ರಾಜ್ಯಮಟ್ಟದಲ್ಲಿ 2 ರ‍್ಯಾಂಕ್ ದೊರೆತಿದೆ.

ವಿಜ್ಞಾನ ವಿಭಾಗದಲ್ಲಿ ಅಕ್ಷಿತಾ 590 ಅಂಕ 98.3 ಪ್ರತಿಶತದೊಂದಿಗೆ  ರಾಜ್ಯಮಟ್ಟದಲ್ಲಿ 9ನೇ ರ‍್ಯಾಂಕ್ ಪಡೆದು ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ನಿಶಾ ನಾರಾಯಣ್ ತೊಳಾರ್ 593 ಅಂಕ 98.83 ಪ್ರತಿಶತದೊಂದಿಗೆ  ರಾಜ್ಯಮಟ್ಟದಲ್ಲಿ 6ನೇ ರ‍್ಯಾಂಕ್ ಪಡೆದು ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಅಕ್ಷಿತಾ ಗಣಿತದಲ್ಲಿ 100 ಅಂಕ ಪಡೆದಿದ್ದಾರೆ. ನಿಶಾ ಅರ್ಥಶಾಸ್ತ್ರದಲ್ಲಿ -100, ವ್ಯವಹಾರ ಅಧ್ಯಯನ -100,ಲೆಕ್ಕಶಾಸ್ತ್ರ- 100 ಸಂಖ್ಯಾಶಾಸ್ತ್ರದಲ್ಲಿ – 100 ಅಂಕ ಪಡೆದಿದ್ದಾರೆ.

ಅತ್ತ್ಯುತ್ತಮ ಫಲಿತಾಂಶ ದಾಖಲಿಸಿ ಕಾಲೇಜಿಗೆ ಕೀರ್ತಿತಂದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ ಅಭಿನಂದಿಸಿದ್ದಾರೆ.

Exit mobile version