Site icon Kundapra.com ಕುಂದಾಪ್ರ ಡಾಟ್ ಕಾಂ

ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೇಘನಾ ವಿಜಯ್ ಪ್ರಬಂಧ ಮಂಡನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಎಂಐಟಿ ಅಂತಿಮ ವರ್ಷದ ಎಐಅಂಡ್ ಎಂಎಲ್ ವಿದ್ಯಾರ್ಥಿನಿ ಮೇಘನಾ ವಿಜಯ್ ಕುಮಾರ್, ಕಾನ್ಫರೆನ್ಸ್ ಸಂಯೋಜಕಿ ಜೀನ್ ಆಶ್ಲೇ ಅವರ ಅಧಿಕೃತ ಆಹ್ವಾನದ ಮೇರೆಗೆ, ಎಸಿಎಸ್ ಟಿಎಂ ಇಂಟೆರ್ ರ್ನ್ಯಾಷನಲ್ ಕಾನ್ಫರೆನ್ಸ್ ದುಭಾಯ್ ನಲ್ಲಿ ವರ್ಚುವಲ್ ಆಗಿ ಪ್ರಬಂಧ ಮಂಡಿಸಿದ್ಧಾರೆ.

ವಿಭಾಗ ಮುಖ್ಯಸ್ಥರಾದ ಡಾ. ಇಂದ್ರ ವಿಜಯ್ ಸಿಂಗ್ ಮತ್ತು ಟಿ. ದಿಲೀಪ್ ಅವರು ಸಹ-ಲೇಖಕರಾಗಿ ಬರೆದ ಸೆಲ್ ಫೋನ್ ಮತ್ತು ಸೆಲ್ ಟವರ್ ವಿಕಿರಣಕ್ಕೆ ಒಡ್ಡಿಕೊಂಡ ಮಕ್ಕಳಲ್ಲಿ ಆಕ್ಸಿಡೇಟಿವ್ ಒತ್ತಡದ ಸೂಚಕಗಳ ಅಧ್ಯಯನ ಎಂಬ ಕಾನ್ಫರೆನ್ಸ್ ಪ್ರಬಂಧವನ್ನು ಸಮ್ಮೇಳನದಲ್ಲಿ ಪ್ರಸ್ತುತಪಡಿಸಲು ಆಯ್ಕೆ ಮಾಡಿದ್ದರಿಂದ ಈ ಆಹ್ವಾನವನ್ನು ನೀಡಲಾಗಿತ್ತು.

Exit mobile version