Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಇನ್ಸ್ಟಾಗ್ರಾಮ್ ಮೂಲಕ ಸ್ಟಾಕ್‌ ಅಡ್ವೈಸ್‌ ಹೆಸರಿನಲ್ಲಿ ವಂಚನೆ, ಪ್ರಕರಣ ದಾಖಲು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇನ್ಸ್ಟಾಗ್ರಾಮ್ ಮೂಲಕ ಕಂಪನಿಯೊಂದರ ಷೇರು ಮಾರುಕಟ್ಟೆಯ  ಸ್ಟಾಕ್‌ ಅಡ್ವೈಸ್‌ ಮಾಡುತ್ತೇನೆ ಎಂದು ನಂಬಿಸಿ ವಂಚನೆ ಎಸಗಿದ ಬಗ್ಗೆ ಪ್ರಕರಣ ದಾಖಲಾಗಿದೆ.

ಕುಂದಾಪುರದ ನಿವಾಸಿ ವಿಘ್ನೇಶ್‌ (28) ಇವರಿಗೆ ಸೈರಾನ್‌ ಟೆಕ್ನಾಲಜೀಸ್ ಕಂಪನಿಯ ಮಾರುಕಟ್ಟೆ ಸ್ಟೋಕ್ ಅಡ್ವೈಸ್‌ ಮಾಡುತ್ತೇವೆಂದು ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದು, ಅದರಂತೆ ಅವರು ಕಂಪನಿಯು ನೀಡಿದ ದೂರವಾಣಿ ನಂಬ್ರಕ್ಕೆ ಕರೆ ಮಾಡಿದಾಗ 6 ತಿಂಗಳವರೆಗೆ ಷೇರು ಮಾರುಕಟ್ಟೆಯಲ್ಲಿ ಸ್ಟೋಕ್ ಅಡ್ವೈಸ್‌ ಮಾಡುವ ಬಗ್ಗೆ 74,300 ರೂ. ಮುಂಗಡವಾಗಿ ಹಣ ಕೊಡಬೇಕು ಎಂದು ತಿಳಿಸಿದ್ದರು.

ಅದರಂತೆ ತನ್ನ ಬ್ಯಾಂಕ್ ಖಾತೆಯಿಂದ  ಕಂಪನಿಯ ಮಹೇಂದ್ರ ಬ್ಯಾಂಕ್ ಖಾತೆಗೆ 38,900ರೂ. ಹಾಗೂ ಎಕ್ಸಿಸ್ ಬ್ಯಾಂಕ್ ಖಾತೆಗೆ 35,400ರೂ, ಹಣವನ್ನು ಪೋನ್ ಪೇಯಿಂದ ವರ್ಗಾವಣೆ ಮಾಡಿದ್ದರು.

ನಂತರ ಷೇರು ಮಾರುಕಟ್ಟೆಯಲ್ಲಿ ಸ್ಟೋಕ್ ಅಡ್ವೈಸ್‌ ಮಾಡದೇ ವಂಚನೆ ಎಸಗಿದ್ದಾರೆ. ನಂತರ ವಿಘ್ನೇಶ್‌ ಸೈಬ‌ರ್ ಕ್ರೈಮ್‌ಗೆ ದೂರು ಸಲ್ಲಿಸಿದ್ದು, ದೂರಿನಂತೆ ಆಪಾದಿತರ ಬ್ಯಾಂಕ್ ಖಾತೆಯನ್ನು ಪ್ರೀಝ್ ಮಾಡಲಾಗಿದೆ. ಈ ಬಗ್ಗೆ ಕುಂದಾಪುರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version