Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ: ಯುವಕರಿಗೆ ಕೌಶಲ್ಯ ಅಭಿವೃದ್ದಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದ ಭಂಡಾರ್ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪನೆಗೆ ಅನುಮತಿ ದೊರೆತಿದೆ. ಇದು ಕರ್ನಾಟಕದ ಮೂರು ಪ್ರಮುಖ ಕಾಲೇಜುಗಳಲ್ಲಿ ಪ್ರಾರಂಭಗೊಂಡಿದೆ. ಭಂಡಾರಕಾರ್ಸ್ ಕಾಲೇಜು ಇದರಲ್ಲಿ ಒಂದಾಗಿದೆ. ಮಾನ್ಯತಾ ಪರೀಕ್ಷಕರಿಂದ 5ರಲ್ಲಿ 4.2 ಅಂಕಗಳೊಂದಿಗೆ ಮಾನ್ಯತೆಯನ್ನು ಪಡೆದಿರುತ್ತದೆ.. ಕಾಲೇಜಿನಲ್ಲಿ ಸ್ಥಾಪಿತವಾದ ಈ ಕೇಂದ್ರವು  ಭಾರತ ಸರಕಾರದ  “ಸ್ಕಿಲ್ ಇಂಡಿಯಾ” ಯೋಜನೆಯಡಿ, ದೇಶಾದ್ಯಾಂತ ಯುವ ಜನತೆಗಾಗಿ ಉಚಿತವಾಗಿ ಕೌಶಲ್ಯ ತರಬೇತಿಯನ್ನು ನೀಡಲಿದೆ.

ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆ 3.0 ಅನುಷ್ಠಾನದಡಿ ಈ ಕೌಶಲ ಕೇಂದ್ರವು, ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಿದೆ. ಈ ಯೋಜನೆಯು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಗಿದ್ದು 300 ಕ್ಕೂ ಹೆಚ್ಚು ಕೌಶಲ್ಯ ಕೋರ್ಸ್ ಗಳನ್ನು  ಯುವಕರಿಗೆ ಲಭ್ಯವಾಗುವಂತೆ ಮಾಡುವ ಮೂಲಕ, ಅವರಿಗೆ ಉದ್ಯೋಗಕ್ಕೆ ಯೋಗ್ಯ ಕೌಶಲ್ಯಗಳನ್ನು ತರಬೇತುಗೊಳಿಸಲಿದೆ.

ಕೌಶಲ್ಯ ಅಭಿವೃದ್ಧಿಗೆ ಪ್ರಮುಖ ಹೆಜ್ಜೆ:
ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ಸ್ಥಾಪಿತವಾದ ಈ ಕೌಶಲ ಕೇಂದ್ರವು, ಯುವಜನರಿಗೆ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಕಲಿಸಲು, ಅವರು ತಮ್ಮ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಲಿದೆ. ಈ ತರಬೇತಿಗಳು ತರಬೇತಿ ಪೂರೈಕೆದಾರರಿಂದ ಉಚಿತವಾಗಿ ನೀಡಲಾಗುತ್ತವೆ.

ಪಿಎಮ್‌ಕೆವಿವೈ  – ಯುವಜನತೆಗಾಗಿ ಮಹತ್ವಪೂರ್ಣ ಯೋಜನೆ:
ಪಿಎಮ್‌ಕೆವಿವೈ 3.0 ಯೋಜನೆಯ ಪರಿಪೂರ್ಣ ಕಾರ್ಯವನ್ನು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ನಿರ್ವಹಿಸುತ್ತದೆ. ಈ ಯೋಜನೆಯಡಿ, ತರಬೇತಿ ಕೇಂದ್ರಗಳು ಟಿ- ಟೈನಿಂಗ್‌ ಸೇಂಟರ್‌ (ಸ್ಮಾರ್ಟ್‌) ಪೋರ್ಟಲ್ ನಲ್ಲಿ  ನೋಂದಾಯಿಸಿಕೊಳ್ಳಬೇಕು.  ಕೌಶಲ್ಯ ಮ್ಯಾನೇಜ್ಮೆಂಟ್ ಹಾಗೂ ಎಸಿ ಸಿ ಸಿ ಆರ್ ಎಡಿಟೇಶನ್ ನಲ್ಲಿ ದಾಖಲು ಮಾಡಿಕೊಳ್ಳಬೇಕು.

ಪೂರ್ವ ಕಲಿಕೆಯ ಗುರುತಿಸುವಿಕೆ (ಆರ್‌ಪಿಎಲ್‌):
ಪಿಎಮ್‌ಕೆವಿವೈ 3.0 ಯೋಜನೆಯಲ್ಲಿ, ಆರ್‌ಪಿಎಲ್‌ ಪ್ರಕ್ರಿಯೆಗೂ ಮಹತ್ವ ನೀಡಲಾಗುತ್ತದೆ. ಈ ಪ್ರಕ್ರಿಯೆಯ ಮೂಲಕ, ವಿದ್ಯಾರ್ಥಿಗಳು ತಮ್ಮ ಹಿಂದಿನ ತರಬೇತಿ, ಅನುಭವ ಹಾಗೂ ಕೌಶಲ್ಯಗಳನ್ನು ಪರಿಶೀಲಿಸಿ, ಅವುಗಳಿಗೆ ಸರಿಯಾದ ಪ್ರಮಾಣಪತ್ರವನ್ನು ಪಡೆಯುತ್ತಾರೆ. ಈ ಪ್ರಕ್ರಿಯೆಯಲ್ಲಿ ಐದು ಹಂತಗಳು ಇವೆ:

1.        ಸಜ್ಜುಗೊಳಿಸುವಿಕೆ

2.        ಕೌನ್ಸೆಲಿಂಗ್ ಮತ್ತು ಪೂರ್ವ-ಸ್ಕ್ರೀನಿಂಗ್

3.        ದೃಷ್ಟಿಕೋನ

4.        ಅಂತಿಮ ಮೌಲ್ಯಮಾಪನ

5.        ಅವಶ್ಯಕ ಪ್ರಮಾಣೀಕರಣ, ಅಂಕಪಟ್ಟಿ ಮತ್ತು ಪಾವತಿ ವಿತರಣೆ

ಪ್ರಮಾಣಪತ್ರ:
ಈ ಮೇಲಿನ ಐದು ಹಂತಗಳ ನಂತರ ಪೂರ್ಣ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ  ರಾಷ್ಟ್ರೀಯ ಮಟ್ಟದ  ಕೇಂದ್ರ ಸರಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಪ್ರಮಾಣಪತ್ರಗಳನ್ನು  ನೀಡಲಾಗುತ್ತದೆ ಎನ್ನುವುದು ವೈಶಿಷ್ಟ್ಯಪೂರ್ಣ. ಈ ಪ್ರಮಾಣಪತ್ರಗಳಿಗೆ  ಪ್ರಪಂಚದ 28 ದೇಶಗಳಲ್ಲಿ ಮಾನ್ಯತೆ ಇರುವುದು ವಿಶೇಷ.  ಇದು  ವಿದ್ಯಾರ್ಥಿಗಳ ಭವಿಷ್ಯದ ಕನಸನ್ನು ಸಾಕಾರಗೊಳಿಸುವಲ್ಲಿ ನೆರವಾಗಲಿದೆ.

ಯುವಕರಿಗೆ ಉದ್ಯೋಗ ಸಿದ್ಧತೆ: ಪಿಎಮ್‌ಕೆವಿವೈ ಯೋಜನೆಯು, ರಾಷ್ಟ್ರದ ಯುವಕರ ಕೌಶಲ್ಯಾಭಿವೃದ್ಧಿಗೆ ಹತ್ತಿರದಲ್ಲಿರುವ ಅಗತ್ಯಗಳನ್ನು ಪೂರೈಸುವುದರೊಂದಿಗೆ, ಅವರ ವ್ಯಾವಹಾರಿಕ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಮೂಲಕ, ಉದ್ಯೋಗ ಕ್ಷೇತ್ರದಲ್ಲಿ ಅವರನ್ನು ಯಶಸ್ವಿಯಾಗಿ ಪೂರೈಸಲು ಸಹಾಯ ಮಾಡುತ್ತದೆ. ಈ ಮೂಲಕ, ಭಂಡಾರ್ಕಾರ್ಸ್‌  ಕಾಲೇಜಿನಲ್ಲಿ ಸ್ಥಾಪಿತವಾದ ಪ್ರಧಾನ ಮಂತ್ರಿ ಕೌಶಲ ಕೇಂದ್ರವು ಯುವಜನತೆಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಮಹತ್ವಪೂರ್ಣ ಹೆಜ್ಜೆಯಾಗಿದೆ. ಕಾಲೇಜು ಈ ಯೋಜನೆಯ ಕೌಶಲ್ಯಗಳನ್ನು ತರಬೇತುಗೊಳಿಸಲು ಮತ್ತಷ್ಟು ಅವಕಾಶಗಳನ್ನು ಕಲ್ಪಿಸಿಕೊಡುವುದರ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗಲಿದೆ.

ಯುವಜನತೆಯ ಉದ್ಯೋಗದ ಕನಸಿಗೆ ಈ ತರಬೇತಿಯು ಇನ್ನಷ್ಟು ಬಲ ನೀಡಲಿದೆ. ಪ್ರತಿಷ್ಠಿತ ಭಂಡಾರ್ಕಾರ್ಸ್‌ ಕಾಲೇಜು ಈಗಾಗಲೇ ಸಾವಿರಾರು ಜನರ ಬದುಕನ್ನು ಹಸನಾಗಿಸಿದೆ. ಉನ್ನತಕ್ಕೆ ಏರಿಸಿದೆ. ಜಗತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿ ಮತ್ತು  ಅವಕಾಶಗಳನ್ನು ಕಾಲೇಜು ಮಾಡಿಕೊಟ್ಟಿದೆ.  ಇದಕ್ಕೆ ಈ ರಾಷ್ಟ್ರಮಟ್ಟದ ತರಬೇತಿಯು ಇನ್ನೊಂದು ಮೆರುಗು ನೀಡಲಿದೆ. ವಿದ್ಯಾರ್ಥಿಗಳು ಭಂಡಾರ್ಕಾರ್ಸ್‌ ಕಾಲೇಜನ್ನು ಉನ್ನತ ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಂಡರೆ ಇಂತಹ ಉತ್ತಮ ಅವಕಾಶಗಳು ಯುವಜನತೆಯ ಭವಿಷ್ಯವನ್ನು ರೂಪಿಸಲು ನೆರವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Exit mobile version