Site icon Kundapra.com ಕುಂದಾಪ್ರ ಡಾಟ್ ಕಾಂ

ಯುವಶಕ್ತಿ ಯುವಕ ಮಂಡಲ ಕಟ್ಕೆರೆ ಆಶ್ರಯದಲ್ಲಿ ಉಚಿತ ಬೇಸಿಗೆ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಯುವಶಕ್ತಿ ಯುವಕ ಮಂಡಲ ಕಟ್ಕೆರೆ ಇವರ ಆಶ್ರಯದಲ್ಲಿ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ 5 ದಿನಗಳ ಕಾಲ ನಡೆಯಲಿರುವ ಅರಿವು 2025 ಒಂದಿಷ್ಟು ಜ್ಞಾನದ ಹರಿವು ಮಕ್ಕಳ ಉಚಿತ ಬೇಸಿಗೆ ಶಿಬಿರದ ಉದ್ಘಾಟನೆ ಜರುಗಿತು.

ಉದ್ಘಾಟನೆಯನ್ನು ರಾಜಶೇಖರ್ ಹೊಳ್ಳ ನಾಗಪಾತ್ರಿಗಳು ಕಟ್ಕೆರೆ ಅವರು ನೆರವೆರಿಸಿ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಕಟ್ಕೆರೆ ಅವರು ವಹಿಸಿದ್ದರು.

ಉದ್ಯಮಿಗಳಾದ ಸುಬೋದ್ ಹೆಗ್ಡೆ ಕಟ್ಕೆರೆ ಹಾಗೂ ಗೋಪಾಲ ಮಡಿವಾಳ ಪಾತ್ರಿಗಳು ಶ್ರೀ ಕಾಳಿಕಾಂಬಾ ದೇವಸ್ಥಾನ ಕಟ್ಕೆರೆ ಅವರುಗಳು ಶುಭ ಕೋರಿದರು. ಸಂಪನ್ಮೂಲ ವ್ಯಕ್ತಿಗಳಾದ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮದ ಯಶಸ್ಸಿಗೆ ಶುಭ ಕೋರಿದರು.

ಗೌರವಧ್ಯಕ್ಷರಾದ ಗಣೇಶ್ ಶೆಟ್ಟಿ ಕಟ್ಕೆರೆ  ಉಪಸ್ಥಿತರಿದ್ದರು.

ಶಿಬಿರದ ಸಂಯೋಜಕರಾದ ವಿಖ್ಯಾತ್ ಕಂಡ್ಲೊರ್ ಕಾರ್ಯಕ್ರಮ ಸಿರೂಪಿಸಿದರು. 5 ದಿನಗಳ ಈ ಶಿಬಿರದಲ್ಲಿ  ಸ್ಥಳೀಯ 98 ವಿದ್ಯಾರ್ಥಿಗಳು ಭಾಗ ವಹಿಸಿದ್ದರು.

Exit mobile version