Site icon Kundapra.com ಕುಂದಾಪ್ರ ಡಾಟ್ ಕಾಂ

ಶಿಕ್ಷಣದ ಹುಡುಕಾಟ ಸಂವಿಧಾನದ ಆಶಯಗಳಿಗೆ ಪೂರಕವಾಗಿರಬೇಕು: ಡಾ. ನಿರಂಜನಾರಾಧ್ಯ

ಮೂಡುಬಿದಿರೆ: ಶಿಕ್ಷಣ ಮಾನವೀಯ ಮೌಲ್ಯ ಹಾಗೂ ಬಹುತ್ವನ್ನು ಕಲಿಸುವ ಸಾಧನ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮವಾದ ಶಿಕ್ಷಣ ದೊರೆತರೆ ಅಸಹಿಷ್ಟುತೆಯನ್ನು ತೊಡೆದು ಹಾಕಿ ಮೌಲ್ಯಗಳ ನೆಲೆಯ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಲಿದೆ ಎಂದು ಡಾ. ನಿರಂಜನಾರಾಧ್ಯ ವಿ. ಪಿ. ಅಭಿಪ್ರಾಯಪಟ್ಟರು.

ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಶಿಕ್ಷಣದಲ್ಲಿ ಸಾಂವಿಧಾನಿಕ ಮೌಲ್ಯಗಳು ಎಂಬ ವಿಷಯದಲ್ಲಿ ಮಾತನಾಡಿದರು. ಸಮಾಜಕ್ಕೆ ಒಳಿತಾಗಬೇಕಿದ್ದ ಶಿಕ್ಷಣ ವ್ಯವಸ್ಥೆ ಇಂದು ಅನಾರೋಗ್ಯಕರ ಸ್ವರ್ಧೆಯನ್ನು ಹುಟ್ಟುಹಾಕಿದೆ. ನಿಜವಾದ ಶಿಕ್ಷಣ ಮನುಷ್ಯನ ಜ್ಞಾನದ ತಳಹದಿಯ ಮೇಲೆ ನಿಂತಿದೆ. ಜ್ಞಾನದ ತಳಹದಿ ಪ್ರೀತಿಯ ಮೇಲೆ ನಿಂತಿದೆ. ಯಾವ ಶಿಕ್ಷಣದಿಂದ ಇವನ್ನೆಲ್ಲಾ ಕಟ್ಟಿಕೊಡಲು ಸಾಧ್ಯವಿಲ್ಲವೋ ಅದು ಬಲಿಷ್ಠ ಭಾರತವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದ ಅವರು ಸಂವಿಧಾನ ಮಾನವೀಯತೆ ಮೂಲಗ್ರಂಥ. ಶಿಕ್ಷಣದಲ್ಲಿ ಹೊಸತನದ ಹುಡುಕಾಟ ಸಂವಿಧಾನದ ಆಶಯಗಳಿಗೆ ಪೂರಕವಾಗಿರಬೇಕು. ಸಮ ಸಮಾಜವನ್ನು ಕಟ್ಟಿಕೊಳ್ಳಬೇಕಾದ ಮೌಲ್ಯಗಳು ಶಿಕ್ಷಣದ ಹುಡುಕಾಟಕ್ಕೆ ದಾರಿದೀಪವಾಗಬೇಕು ಎಂದರು.

Exit mobile version