Site icon Kundapra.com ಕುಂದಾಪ್ರ ಡಾಟ್ ಕಾಂ

ಎನ್‌ಐಎಫ್‌ಟಿ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪ.ಪೂ ಕಾಲೇಜಿನ 13 ವಿದ್ಯಾರ್ಥಿಗಳು ಎರಡನೇ ಹಂತಕ್ಕೆ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸುವ ರಾಷ್ಟ್ರಮಟ್ಟದ ಎನ್‌ಐಎಫ್‌ಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ 13 ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಸೃಜನ್ ಆರ್ ಗುರಿಕಾರ್, ಯಶ್ಮಿತಾ ಕೆ., ಚರಣ್ ಜಿಎಂ., ಚಿನ್ಮಯಿ ಆರ್., ಹರ್ಷ ಎಸ್. ಗೌಡ, ಜೀವಿತ ಜಿ. ಆರ್., ಮಾನಸಿ ಪಿ., ನವ್ಯ ಕೆ. ಆರ್., ಪೂರ್ವಿಕ್ ಕೆ.ಸಿ., ಪ್ರಾಪ್ತಿ ಎಂ. ಗೌಡ, ರಕ್ಷಾ, ಸುಖಿ ಆರ್. ಗೌಡ, ವಿಕಾಸ್ ಡಿ. ಸಿ. ಆಯ್ಕೆಯಾಗಿದ್ದಾರೆ.

ಪಿಯು ವಿದ್ಯಾರ್ಥಿಗಳು ಎದುರಿಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಅತ್ಯುತ್ತಮ ತರಬೇತಿಯನ್ನು ನೀಡುತ್ತಾ ಬಂದಿದ್ದು ಎಲ್ಲಾ ವಿಭಾಗದಲ್ಲೂ ಯಶಸ್ವೀ ಫಲಿತಾಂಶ ನೀಡುತ್ತಿದೆ.

ಪರೀಕ್ಷೆಯಲ್ಲಿ  ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕರು, ಪ್ರಾಂಶುಪಾಲರು, ಎನ್‌ಐಎಫ್‌ಟಿ ಪರೀಕ್ಷೆಯ ಸಂಯೋಜಕರಾದ ರಕ್ಷಿತ್, ಸುಮಂತ್ ದಾಮ್ಲೆ, ಶರತ್ ಅಭಿನಂದಿಸಿದ್ದಾರೆ.

Exit mobile version