Kundapra.com ಕುಂದಾಪ್ರ ಡಾಟ್ ಕಾಂ

ಸರ್ವರ ಸಹಭಾಗಿತ್ವದಿಂದ ಕನ್ನಡ ಮಾಧ್ಯಮ ಶಾಲೆಗಳ ಯಶಸ್ಸು: ಡಾ. ಎಂ ಮೋಹನ ಆಳ್ವ

ಮೂಡುಬಿದಿರೆ: ಕನ್ನಡ ಮಾಧ್ಯಮ ಶಾಲೆಗಳ ಸೋಲು  ಶ್ರೀಸಾಮಾನ್ಯನ, ಸಂಸ್ಕೃತಿಯ ಸೋಲು ಎಂದೇ ಭಾವಿಸಬೇಕಾಗುತ್ತದೆ. ನಮ್ಮನ್ನಾಳುವವರು, ಇಲಾಖೆ, ಶಿಕ್ಷಕರು ಮತ್ತು ಪಾಲಕರು ಸಹಭಾಗಿತ್ವದೊಂದಿಗೆ ಈ ಕಾಲಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ತಂದರೆ ಕನ್ನಡ ಮಾಧ್ಯಮ ಶಿಕ್ಷಣದಲ್ಲಿಯೂ ಹೊಸತನ ಕಾಣಲು ಸಾಧ್ಯವಿದೆ ಎಂದು ಶಿಕ್ಷಣ ತಜ್ಞ ಡಾ. ಎಂ ಮೋಹನ ಆಳ್ವ ಅಭಿಪ್ರಾಯಪಟ್ಟರು.

ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಹೊಸತನದ ಹುಡುಕಾಟದಲ್ಲಿ ಕನ್ನಡ ಮಾಧ್ಯಮ ಎಂಬ ವಿಷಯದಲ್ಲಿ ಮಾತನಾಡಿದರು. ಕನ್ನಡ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ ಎಂದು ದೂರದಲ್ಲಿ ನಿಂತು ಹಳಿಯುವ ಬದಲಿಗೆ ನಮ್ಮೂರಿನ ಕನ್ನಡ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಕಟ್ಟಿ ಬೆಳೆಸುವುದು ಹೇಗೆ ಎಂಬ ಕುರಿತು ಯೋಚಿಸಬೇಕಾಗಿದೆ. ಈ ವಿಚಾರದಲ್ಲಿ ಸರಕಾರ ಎಚ್ಚೆತ್ತುಕೊಳ್ಳುವುದು, ಶಿಕ್ಷಕರು, ಪಾಲಕರು ತಮ್ಮ ಜವಾಬ್ದಾರಿಯನ್ನು ಅರಿಯವುದು ಅತಿ ಮುಖ್ಯ ಎಂದರು.

Exit mobile version