ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಅಧಿದೇವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಶನಿವಾರ ದೇವಳದಲ್ಲಿ ಧ್ವಜಾರೋಹಣ ನೆರವೆರಿಸಲಾಯಿತು.
ಈ ಸಂದರ್ಭದಲ್ಲಿ ಸೇನೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ದೇವಳದ ತಂತ್ರಿ ರಾಜೇಶ್ ಐತಾಳ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪರಮೇಶ್ವರ ಪಟವಾಲ್, ಪ್ರಶಾಂತ್ ಕುಮಾರ್ ಶೆಟ್ಟಿ, ಜಯರಾಮ್ ಯಡ್ತರೆ, ದೊಟ್ಟಯ್ಯ ಪೂಜಾರಿ, ಇಂದಿರಾ ಕೊಠಾರಿ, ಕೊಲ್ಲೂರು ಮೂಕಾಂವಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ ಬಾಬು ಹೆಗ್ಡೆ ತಗ್ಗರ್ಸೆ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಕೊಲ್ಲೂರು ದೇವಳದ ಧರ್ಮದರ್ಶಿ ಧನಾಕ್ಷೀ ವಿಶ್ವನಾಥ ಪೂಜಾರಿ ಹಾಗೂ ದೇವಳದ ಸಿಬ್ಬಂದಿಗಳು, ಊರಿನವರು ಇದ್ದರು.
ಮೇ.2ರಂದು ಶ್ರೀ ದೇವರ ಮನ್ಮಹಾರಥೋತ್ಸವ ಜರುಗಲಿದೆ.

