Kundapra.com ಕುಂದಾಪ್ರ ಡಾಟ್ ಕಾಂ

ಶಿರೂರಿನಲ್ಲಿ ಬೈಕುಗಳ ಮುಖಾಮುಖಿ ಡಿಕ್ಕಿ. ಗಾಯಾಳು ಆಸ್ಪತ್ರೆಗೆ

ಬೈಂದೂರು,ನ27: ಇಲ್ಲಿಗೆ ಸಮೀಪದ ಶಿರೂರು ಗ್ರಾಮ ಪಂಚಾಯತ್ ಎದುರಿನ ರಾಷ್ಟ್ರೀಯ ಹೆದಾರಿ 66ರಲ್ಲಿ ಬ್ಯೆಕ್‌ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬ್ಯೆಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ರಾತ್ರಿ ವರದಿಯಾಗಿದೆ.

ಸಿಗಂದೂರು ಮೇಳದಲ್ಲಿ ವೇಷಧಾರಿಯಾಗಿರುವ ಸುದೀಪ್ ಭಟ್ಕಳಕ್ಕೆ ಯಕ್ಷಗಾನಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇನ್ನೊರ್ವ ವ್ಯಕ್ತಿ ಭಟ್ಕಳದ ವೆಂಕಟಾಪುರದ ನಿವಾಸಿ ವೆಂಕಟಪ್ಪ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯೆಂದೂರು ವೃತ್ತ ನಿರೀಕ್ಷಕ ಸುದರ್ಶನ್, ಬ್ಯೆಂದೂರು ಠಾಣಾಧಿಕಾರಿ ಸಂತೋಷ ಕಾಯ್ಕಿಣಿ ಘಟನಾ ಸ್ಥಳಕ್ಕಾಗಮಿಸಿದ್ದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bike accident in shiruru (1)

Exit mobile version