Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ 2ನೇ ರ್ಯಾಂಕ್‌ ಪಡೆದ ಸುಶ್ಮಿತಾ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ 2ನೇ ರ್ಯಾಂಕ್‌ ಪಡೆದ ಗಂಗೊಳ್ಳಿ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಎಸ್. ಗಾಣಿಗ ಅವರನ್ನು ಅವರ ಮನೆಯಲ್ಲಿ ನಾಯಕವಾಡಿ-ಗುಜ್ಜಾಡಿ ಗಾಣಿಗ ಸಮಾಜ ಬಾಂಧವರ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಗಾಣಿಗ ಸಮಾಜದ ಮುಖಂಡರಾದ ನಾರಾಯಣ ಗಾಣಿಗ ಮೇಲಂಡಿ, ಸೀತಾರಾಮ ಗಾಣಿಗ ಗಂಗೊಳ್ಳಿ, ಪ್ರಮೋದ ಗಾಣಿಗ ಗಂಗೊಳ್ಳಿ, ಗುರುರಾಜ್ ಗಾಣಿಗ ಗುಜ್ಜಾಡಿ, ಸನತ್ ಗಾಣಿಗ, ಸುಮಿತ್ ಗಾಣಿಗ, ನಿತಿನ್ ಗಾಣಿಗ, ಉದಯ ಗಾಣಿಗ ಗಂಗೊಳ್ಳಿ, ಗಂಗಾಧರ ಗಾಣಿಗ ಗಂಗೊಳ್ಳಿ ಮತ್ತು ಗೋವಿಂದ ಗಾಣಿಗ ಗಂಗೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Exit mobile version