Kundapra.com ಕುಂದಾಪ್ರ ಡಾಟ್ ಕಾಂ

ಮೇ.14ರಂದು ಹಳಗೇರಿಯ ಶ್ರೀ ಬೊಬ್ಬರ್ಯ ಮತ್ತು ಉಮ್ಮಲ್ತಿ ಹಾಗೂ ಸಪರಿವಾರ ದೈವಸ್ಥಾನದ 4ನೇ ವರ್ಷದ ವರ್ಧಂತ್ಯೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಕಂಬದಕೋಣೆಯ ಹಳಗೇರಿ ಗ್ರಾಮದ ಶ್ರೀ ಬೊಬ್ಬರ್ಯ ಮತ್ತು ಉಮ್ಮಲ್ತಿ ಹಾಗೂ ಸಪರಿವಾರ ದೈವಸ್ಥಾನದ 4ನೇ ವರ್ಷದ ವರ್ಧಂತ್ಯೋತ್ಸವ ಮೇ.14 ಬುಧವಾರದಂದು ನಡೆಯಲಿದೆ.

ಅಂದು ಬೆಳಿಗ್ಗೆ ಗಂಟೆ 8.00ರಿಂದ ನಾಗದೇವರಿಗೆ ಶುದ್ಧಕಲಶಾಭಿಷೇಕ, ಸಂಜೆ ಗಂಟೆ 4.00ರಿಂದ ಶ್ರೀ ಬೊಬ್ಬರ್ಯ ಮತ್ತು ಉಮ್ಮಲ್ತಿ ಹಾಗೂ ಸಪರಿವಾರ ದೈವಗಳ ಕಲಾಭಿವೃದ್ಧಿಹೋಮ ನಡೆಯಲಿರುವುದು ಹಾಗೂ ರಾತ್ರಿ ಗಂಟೆ 8.00 ರಿಂದ ಅನ್ನಸಂತರ್ಪಣೆ ಜರುಗಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಾತ್ರಿ ಗಂಟೆ 8.00 ರಿಂದ 9.30 ರವರೆಗೆ ಮನು ಹಂದಾಡಿ ಮತ್ತು ಬಳಗದವರಿಂದ ಹಾಸ್ಯ ನಗೆಸಂಜೆ ಕಾರ್ಯಕ್ರಮ ಜರುಗಲಿರುವುದು. ಬಳಿಕ 9.30ರಿಂದ 10.30ರವರೆಗೆ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿರುವುದು. ರಾತ್ರಿ ಗಂಟೆ 10.30ರಿಂದ 12.00ರ ವರೆಗೆ ಸ್ಥಳೀಯ ನೃತ್ಯ ವೈಭವ ಕಾರ್ಯಕ್ರಮ ಜರುಗಲಿರುವುದು ಎಂದು ಪ್ರಕಟಣೆ ತಿಳಿಸಿದೆ.

Exit mobile version