Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ, 168 ಯುನಿಟ್ ರಕ್ತ ಸಂಗ್ರಹ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ  ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಕಸ್ತೂರಬಾ ಆಸ್ಪತ್ರೆ ಮಣಿಪಾಲ ಲಯನ್ಸ್ ಕ್ರೌನ್ ಕುಂದಾಪುರ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್, ರೆಡ್ ರಿಬ್ಬನ್ ಕ್ಲಬ್ , ಎನ್.ಸಿ.ಸಿ ಇವರು ಸಹಯೋಗದೊಂದಿಗೆ “ಸ್ವಯಂಪ್ರೇರಿತ ಬ್ರಹತ್ ರಕ್ತದಾನ ಶಿಬಿರ” ನಡೆಯಿತು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಮಣಿಪಾಲ ಕಸ್ತೂರಬಾ ಆಸ್ಪತ್ರೆ ಇದರ ಸಂಯೋಜಿತ ಆರೋಗ್ಯ ಮತ್ತು ಜೈವಿಕ ವೈದ್ಯಕೀಯ ಕಾರ್ಯಕ್ರಮ ಇಲ್ಲಿನ ದೀಪ್ ಮಡ್ಕಂಕರ್ ಅವರು ರಕ್ತದಾನದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದರ ಸಭಾಪತಿ ಜಯಕರ್‌ ಶೆಟ್ಟಿ ಮಾತನಾಡಿ, ತಂತ್ರಜ್ಞಾನ ಮುಂದುವರೂ ರಕ್ತ ತಯಾರಿಸಲು ಅಥವಾ ದೇಹದ ಅಂಗಾಂಗಗಳು ತಯಾರಿ ತಂತ್ರಜ್ಞಾನ ಬಂದಿಲ್ಲ. ಒಂದೊಮ್ಮೆ ತೀವ್ರ ರಕ್ತಸ್ರಾವವಾದರೆ ರಕ್ತ ನೀಡುವುದರಿಂದ ಮಾತ್ರ ರಕ್ತಸ್ರಾವ ನಿಲ್ಲಿಸಬಹುದು. ರಕ್ತನಿಧಿಗಳಲ್ಲಿ ರಕ್ತದ ಕೊರತೆ ಇದೆ. ಹಾಗಾಗಿ ರಕ್ತದಾನ ಮಾಡಿ ಜೀವ ಉಳಿಸಿ. ಮಾನವೀಯತೆ ನೆಲೆಯಲ್ಲಿ ರಕ್ತದಾನ ಮಾಡಿ. ಅದು ಮನುಷ್ಯತ್ವದ ಋಣ. ಇಂತಹ ಕಾರ್ಯದಲ್ಲಿ  ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು.

ವೇದಿಕೆಯಲ್ಲಿ ಕುಂದಾಪುರದ ಲಯನ್ಸ್ ಕ್ರೌನ್ ಅಧ್ಯಕ್ಷ ದಿನಕರ ಶೆಟ್ಟಿ, ಕುಂದಾಪುರ ಲಯನ್ಸ್ ಕ್ರೌನ್ ಸದಸ್ಯರು ಕಿರಣ್ ಆಚಾರ್ಯ, ಮುತ್ತಯ್ಯ ಶೆಟ್ಟಿ, ಸತ್ಯನಾರಾಯಣ ಪುರಾಣಿಕ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಎನ್.ಸಿ.ಸಿ.ಅಧಿಕಾರಿ ಶರಣ್ ಎಸ್.ಜೆ. ಉಪಸ್ಥಿತರಿದ್ದರು.

ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ರಾಮಚಂದ್ರ ಆಚಾರ್ಯ ಸ್ವಾಗತಿಸಿದರು. ಯುಥ್ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜನಾಧಿಕಾರಿ ವಿದ್ಯಾರಾಣಿ ವಂದಿಸಿದರು. ವಿದ್ಯಾರ್ಥಿನಿ ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 168 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Exit mobile version