Kundapra.com ಕುಂದಾಪ್ರ ಡಾಟ್ ಕಾಂ

ಏಷ್ಯನ್ ಪವರ್ ಲಿಪ್ಪಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಾಗಶ್ರೀ ಉಪ್ಪಿನಕುದ್ರುವಿಗೆ 3 ಚಿನ್ನ, 1 ಬೆಳ್ಳಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಉತ್ತರಾಖಂಡದಲ್ಲಿ ಇತ್ತೀಚಿಗೆ ನಡೆದ ಏಷ್ಯನ್ ಪವರ್ ಲಿಪ್ಪಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತಾಲೂಕಿನ ಉಪ್ಪಿನಕುದ್ರು ನಾಗಶ್ರೀ ಗಣೇಶ್ ಶೇರುಗಾ‌ರ್ ಅವರು ಮೂರು ಚಿನ್ನ ಒಂದು ಬೆಳ್ಳಿ ಪದಕ ಪಡೆಯುವುದರೊಂದಿಗೆ ಹೊಸ ದಾಖಲೆಯನ್ನು ನಿರ್ಮಿಸಿ ನ್ಯೂ ಏಷ್ಯನ್ ಚಾಂಪಿಯನ್  ಪಡೆದಿದ್ದಾರೆ.

ಈಕೆ ಉಪ್ಪಿನಕುದ್ರು  ದಿ. ಗಣೇಶ್ ಶೇರುಗಾರ್ ಹಾಗೂ ಪ್ರೇಮಲತಾ ಗಣೇಶ್ ಶೇರುಗಾರ್ ದಂಪತಿಯ ಪುತ್ರಿ.

ಗ್ರಾಮೀಣ ಪ್ರದೇಶದ ಅವರು ಕಠಿಣ ಪರಿಶ್ರಮದಿಂದ ವೇಯ್ಟ್ ಲಿಫ್ಟಿಂಗ್ ಹಾಗೂ ಪವರ್ ಲಿಫ್ಟಿಂಗ್ ಸಾಧನೆ ಮಾಡಿ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಇದನ್ನೂ ಓದಿ: ► ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಉಪ್ಪಿನಕುದ್ರು ನಾಗಶ್ರೀಗೆ ಕಂಚಿನ ಪದಕ – https://kundapraa.com/?p=84466&

Exit mobile version