ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿಬಿಎಸ್ಇ ಸ್ಕೂಲ್‌ನಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಸ್ಕಿಲ್ ಡೆವಲಪ್‌ಮೆಂಟ್ ತರಬೇತುದಾರ ಡಾ. ಶಿಜು ಥೊಮಸ್ ಅವರು ‘ಹೊಸ ಶೈಕ್ಷಣಿಕ ಆಯಾಮಗಳುʼ ಹಾಗೂ ‘ಕ್ಲಾಸ್ ರೂಮ್ ಮ್ಯಾನೇಜ್‌ಮೆಂಟ್’ವಿಷಯದ ಕುರಿತು ಶಿಕ್ಷಕರಿಗೆ ತರಬೇತಿ ಯನ್ನು ನೀಡಿ, ಮಾತನಾಡಿ, ತರಗತಿಯಲ್ಲಿ ವಿವಿಧ ಕೌಟುಂಬಿಕ ಹಿನ್ನಲೆಯುಳ್ಳ ಮಕ್ಕಳು, ವಿವಿಧ ಬುದ್ಧಿಮತ್ತೆ ಮಟ್ಟದ ಮಕ್ಕಳು, ವಿವಿಧ ಅಗತ್ಯತೆಗಳನ್ನು ಹೊಂದಿರುವ ಮಕ್ಕಳಿದ್ದು ಪ್ರತೀ ಮಗುವಿನ ಮನಃ ಸ್ಥಿತಿಯನ್ನು ಅರಿತು ಅವರೊಂದಿಗೆ ಬೆರೆತು ಶಿಕ್ಷಕರು ಮಕ್ಕಳ ಕಲಿಕೆಗೆ ಸಹಕಾರವಾಗಬೇಕು ಎಂದು ತಿಳಿಸಿದರು.
ವಿವಿಧ ಘಟನಾವಳಿಗಳನ್ನಾಧರಿಸಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಬಾಂಧ್ಯವ್ಯದ ಕುರಿತು ವಿವರಿಸಿದರು. ಎನ್‌ಇಪಿ ಗೆ ಅನುಗುಣವಾಗಿ ಹೊಸ ಶೈಕ್ಷಣಿಕ ವಿಧಾನಗಳನ್ನು ಅಳವಡಿಸಿ ಬೋಧನಾ ಪದ್ದತಿಯನ್ನು ಸುಧಾರಿಸುವ ಕ್ರಮಗಳನ್ನು ತಿಳಿಸಿದರು.
ಶಿಕ್ಷಕರಿಗೆ ವಿವಿಧ ಚಟುವಟಿಕೆಗಳನ್ನು ನೀಡಿ ಪ್ರಾಯೋಗಿಕ ಕಲಿಕೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ, ಪ್ರಾಂಶುಪಾಲರಾದ ನಿತಿನ್ ಡಿ’ಆಲ್ಮೇಡಾ, ಶಿಕ್ಷಕ ವೃಂದದವರು ಹಾಗೂ ಆಕ್ಸ್ಫರ್ಡ್ ಎಕ್ಸಿಕ್ಯೂಟಿವ್ ಸುಜಿತ್ ಕುಮಾರ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಾಂಶುಪಾಲ ನಿತಿನ್ ಡಿ. ಆಲ್ಮೇಡಾ ನಿರೂಪಿಸಿ, ಸ್ವಾಗತಿಸಿದರು.

