Site icon Kundapra.com ಕುಂದಾಪ್ರ ಡಾಟ್ ಕಾಂ

ಎಂಐಟಿಕೆ ಯಲ್ಲಿ ವಿಟಿಯು ಕನ್ಸೋರ್ಟಿಯಂ ತರಬೇತಿ ಕಾರ್ಯಗಾರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಈಬಿಸ್‌ಸಿಒ ಇಂಜಿನಿಯರಿಂಗ್ ಸೂಟ್ ಎಎಂಎ ಮೈಕ್ರೋ ಕೋರ್ಸುಗಳು ಮತ್ತು ಐಇಇಇ ಮೇಲೆ ಕೇಂದ್ರೀಕರಿಸಿ ವಿಟಿಯು ಕನ್ಸೋರ್ಟಿಯಮ್ ತರಬೇತಿ ಕಾರ್ಯಗಾರ ನಡೆಯಿತು.

6ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಸಂಶೋಧನಾ ಕೌಶಲ್ಯ ಮತ್ತು ವೃತ್ತಿಪರ ಅಭಿವೃದ್ಧಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿ ಸಲಾಯಿತು.

ಈಬಿಸ್‌ಸಿಒ – ಐಇಇಇ ದಕ್ಷಿಣ ಭಾರತದ ತರಬೇತಿ ವ್ಯವಸ್ಥಾಪಕ ಎಂ. ಎಸ್ ಶ್ರೀನಿವಾಸ ನೇತೃತ್ವ ವಹಿಸಿದ್ದರು.

ತರಬೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಮ್ ಅವರು ವಹಿಸಿ, ಕಾರ್ಯಗಾರವನ್ನು ಉದ್ಘಾಟಿಸಿದರು.

ಐಇಇಇ ನ ಸದಸ್ಯರಾಗಿರುವ ಅವರು ವಿ. ಟಿ. ಯು ಕನ್ಸೋರ್ಟಿಯಂ ವತಿಯಿಂದ ಲಭ್ಯವಿರುವ ಎಲ್ಲ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.

ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿಸೋಜಾ ಹಾಗೂ ಗ್ರಂಥಾಪಾಲರಾದ ಶ್ಯಾಮ್ ನಾಯ್ಕ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಶ್ರೀನಿಧಿ ರಾವ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version