Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಕುಂದಗನ್ನಡ ಸಂಘದ ವಿದ್ಯಾರ್ಥಿಗಳಿಂದ ವಿಸ್ತರಣಾ ಚಟುವಟಿಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕುಂದಗನ್ನಡ ಸಂಘದ ವಿದ್ಯಾರ್ಥಿಗಳು ವಿಸ್ತರಣಾ ಚಟುವಟಿಕೆಯ ಭಾಗವಾಗಿ ಮೂಡುಗಿಳಿಯಾರಿನ ಶ್ರೀ ಸ್ವಾಮಿ ನಂದೀಕೇಶ್ವರ ದೈವಸ್ಥಾನದ ಕೋಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿದರು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯ ಮೋಕ್ತೇಸರರಾದ ಸುಭಾಷ್ ಚಂದ್ರ ಶೆಟ್ಟಿ, ಸೇವಾಕರ್ತರಾದ ರತ್ನಾಕರ್ ಶೆಟ್ಟಿ, ಚಂದ್ರ ಪಾಣಾ, ಕಾಲೇಜಿನ ಕುಂದಗನ್ನಡ ಸಂಘದ ಸಂಯೋಜಕಿ ರೇಷ್ಮಾ ಶೆಟ್ಟಿ, ಪ್ರವೀಣ ಪೂಜಾರಿ ಉಪಸ್ಥಿತರಿದ್ದರು.

Exit mobile version