ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಇಡೂರು ಕುಂಜ್ಞಾಡಿ ನಿವಾಸಿ ಲಕ್ಷ್ಮೀ ಅವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ 16 ಗ್ರಾಂ ತೂಕದ 2 ಚಿನ್ನದ ಬಳೆ ಹಾಗೂ ದೇವರ ಕೋಣೆಯ ಡಬ್ಬಿಯಲ್ಲಿದ್ದ ಚಿಲ್ಲರೆ ಹಣವನ್ನು ಕದ್ದಿದ್ದಾರೆ.
ಲಕ್ಷ್ಮೀ ಅವರು ಮೇ. 16ರಂದು ಮನೆಗೆ ಬೀಗ ಹಾಕಿ ಕಾರ್ಯನಿಮಿತ್ತ ಬೇರೆಡೆಗೆ ತೆರಳಿದವರು ಮೇ. 19ರಂದು ಮರಳಿ ಬಂದು ನೋಡಿದಾಗ ಮನೆಯೊಳಗಿನ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪರಿಶೀಲಿಸಿದಾಗ ಕಳ್ಳರು ಛಾವಣಿಯ ಹೆಂಚನ್ನು ತೆಗೆದು ಒಳಪ್ರವೇಶಿಸಿ ಕೃತ್ಯ ಎಸಗಿರುವುದು ಕಂಡು ಬಂದಿತು. ಸುಮಾರು 80 ಸಾವಿರ ರೂ. ಮೌಲ್ಯದ ಸೊತ್ತು ಕಳವಾಗಿದೆ ಎಂದು ಕೊಲ್ಲೂರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

