Site icon Kundapra.com ಕುಂದಾಪ್ರ ಡಾಟ್ ಕಾಂ

ಬಸ್ರೂರು ಶ್ರೀ ಶಾರದಾ ಕಾಲೇಜು: ಶೈಕ್ಷಣಿಕ ಉದ್ದೇಶಿತ ಕೈಗಾರಿಕಾ ಭೇಟಿ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಿತ ಕೈಗಾರಿಕಾ ಭೇಟಿ ಕಾರ್ಯಕ್ರಮವನ್ನು ಕೋಟಾದ ಜನತಾ ಪಿಶ್ ಇಂಡಸ್ಟ್ರೀಸ್ ಇಲ್ಲಿ ನಡೆಸಲಾಯಿತು.

ಇದರಿಂದ ವಿದ್ಯಾರ್ಥಿಗಳು ಜನತಾ ಪಿಶ್ ಇಂಡಸ್ಟ್ರೀಸ್ ಕಾರ್ಯ ನಿರ್ವಹಣೆ, ತಂತ್ರಜ್ಞಾನ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ವ್ಯವಹಾರದ ಕುರಿತು ಅನೇಕ ವಿಷಯಗಳ ಬಗ್ಗೆ ಸಂಸ್ಥೆಯ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು.

ಕಾರ್ಯಕ್ರದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ರವಿಚಂದ್ರ, ಉಪನ್ಯಾಸಕರುಗಳಾದ ಸಂದೀಪ ಕೆ., ದೀಪಕ್ ಕುಮಾರ್ ಶೆಟ್ಟಿ, ಸುಹಾಸ್‌ ಉಪಸ್ಥಿತರಿದ್ದರು.

Exit mobile version