Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸುಶ್ಮಿತಾಳಿಗೆ ಸನ್ಮಾನ 

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ವೈಷ್ಣವಿ ಇವೆಂಟ್ಸ್ ಗಂಗೊಳ್ಳಿ, ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿ ಮತ್ತು ಬಿಲ್ಲವರ ಹಿತ ರಕ್ಷಣಾ ವೇದಿಕೆ ಗಂಗೊಳ್ಳಿಯ ವತಿಯಿಂದ 2024-25ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಎಸ್. ಗಾಣಿಗ ಅವರನ್ನು ಗಂಗೊಳ್ಳಿಯ ಶ್ರೀ ಸೀತಾಳಿ ನವದುರ್ಗೆ ದೇವಸ್ಥಾನದ ಆವರಣದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೈಷ್ಣವಿ ಇವೆಂಟ್ಸ್ ಮಾಲೀಕರಾದ ಗೋಪಾಲ ಚಂದನ್, ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ. ಗೋಪಾಲ ಪೂಜಾರಿ, ಸಂಜೀವ ಪಾರ್ವತಿ ಪ್ರಕಾಶನದ ನಿರ್ವಾಹಕ ನರೇಂದ್ರ ಎಸ್. ಗಂಗೊಳ್ಳಿ, ಶ್ರೀ ಸೀತಾಳಿ ನವದುರ್ಗೆ ದೇವಸ್ಥಾನದ ಪಾತ್ರಿ ರಘುನಾಥ ಪೂಜಾರಿ, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್, ಪಂಚಾಯತ್ ಸದಸ್ಯೆ ಮಮತಾ ಗಾಣಿಗ ಮತ್ತು ಬಿಲ್ಲವರ ಹಿತರಕ್ಷಣಾ ವೇದಿಕೆಯ ಸದಸ್ಯರುಗಳಾದ ಆನಂದ ಬಿಲ್ಲವ ಹಾಗೂ ರಾಮಚಂದ್ರ ಜಿ. ಉಪಸ್ಥಿತರಿದ್ದರು.

Exit mobile version