Site icon Kundapra.com ಕುಂದಾಪ್ರ ಡಾಟ್ ಕಾಂ

ಮರಳುಗಾರಿಕೆ ಅರ್ಜಿ ಸಲ್ಲಿಸಿದ 48 ಗಂಟೆಯೊಳಗೆ ಪರಿಶೀಲಿಸಿ: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಮಳೆಗಾಲದ ಬಳಿಕ ನಿರ್ಮಾಣ ಚಟುವಟಿಕೆಗೆ ಪೂರಕವಾಗಿ ಕಡಿಮೆ ದರದಲ್ಲಿ ಗುಣಮಟ್ಟದ ಮರಳು ಜನರ ಬೇಡಿಕೆಗೆ ತಕ್ಕಂತೆ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಅವರು ಅಂದು ಜಿಲ್ಲಾ ವ್ಯಾಪ್ತಿಯ ಮರಳು ಸಮಸ್ಯೆಯ ಬಗ್ಗೆ ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿಯ ಕೋರ್ಟ್‌ ಹಾಲ್‌ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮರಳುಗಾರಿಕೆಗೆ ಅರ್ಜಿ ಸಲ್ಲಿಸಿದ 48 ಗಂಟೆಯೊಳಗೆ ಪರಿಶೀಲಿಸಬೇಕು ಎಂದರು.

ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ಹಿರಿಯ ಭೂ ವಿಜ್ಙಾನಿ ಸಂದೀಪ್‌ ಮಾತನಾಡಿ, 118 ಗ್ರಾಪಂಗಳಲ್ಲಿ ಮರಳು ತೆರವಿಗೆ ಅವಕಾಶವಿದ್ದರೂ 37 ಗ್ರಾಪಂಗಳಿಗೆ ಆಶಯ ಪತ್ರ ನೀಡಿದ್ದು, 28 ಬ್ಲಾಕ್‌ ಗಳಲ್ಲಿ ಸ್ಥಳೀಯವಾಗಿ ಸಮಸ್ಯೆಯಿದೆ. ಇನ್ನೂ 20 ಗ್ರಾಪಂ. ಗಳಿಗೆ ರಾಯಧನ ಶೇ.25 ಪಾಲು ಆದಾಯ ದೊರತೆರೂ ಪಿಡಿಒಗಳು ಸ್ಥಳೀಯ ರಾಜಕೀಯ, ಲೋಕಾಯುಕ್ತಕ್ಕೆ  ವಿನಾಕೃಣ ದೂರಿನ ಹಿನ್ನಲೆಯಲ್ಲಿ ಬ್ಯಾಕ್‌ ಮರಳುಗಾರಿಕೆ ಅವಕಾಶಕ್ಕಾಗಿ ಹಿಂದೇಟು ಹಾಕುತ್ತಿದ್ದಾರೆ ಎಂದರು.

ಸರಕಾರಿ ಕಾಮಗಾರಿಕೆ ಮೀಸಲಿರುವ 7 ಬ್ಲಾಕ್‌ಗಳಲ್ಲಿ 2.79 ಲಕ್ಷ ಟನ್‌ ಮರಳಿದ್ದು ಕೇವಲ 78,000 ಮೆ. ಟನ್‌ ತೆಗಯಲಾಗಿದೆ. ಸರಕಾರಿ ಕಾಮಗಾರಿಗೆ ಶೇ.75, ಜನ ಸಾಮನ್ಯರಿಗೆ ಶೇ.25 ಮರಳು ಒದಗಿಸಲಾಗುತ್ತಿದೆ ಎಂದರು.

ಶೇ.50ರಷ್ಟು ಸಾಂಪ್ರದಾಯಿಕ ಮರಳುಗಾರಿಕೆಗೆ ತಾಲೂಕು ಮಟ್ಟದ ಬದಲು ಜಿಲ್ಲಾ ಮಟ್ಟದಲ್ಲಿ ಟೆಂಡರು ಕರೆಯುವ ನಿಟ್ಟಿನಲ್ಲಿ ಶಾಸಕರ ಮನವಿ ಪತ್ರದ ಆಧಾರದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಯಶಪಾಲ್‌ ಎ. ಸುವರ್ಣ, ಕಿರಣ್‌ ಕುಮಾರ್‌ ಕೊಡ್ಗಿ, ಗುರುರಾಜ್‌ ಗಂಟಿಹೊಳೆ, ಗುರ್ಮೆ ಸುರೇಶ್‌ ಶೆಟ್ಟಿ, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪೋಲೀಸ್‌ ಅಧೀಕ್ಷಕ ಡಾ. ಅರುಣ್‌ ಕೆ. ಉಪಸ್ಥಿತರಿದ್ದರು.

Exit mobile version